Skip to playerSkip to main content
  • 5 years ago
ಎಥರ್ ಎನರ್ಜಿ ಕಂಪನಿಯು ಹೊಸ ಕೇಂದ್ರಗಳನ್ನು ತೆರೆಯುವ ಮೂಲಕ ದೇಶಾದ್ಯಂತ ತನ್ನ ಕಾರ್ಯಾಚರಣೆಯನ್ನು ವೇಗವಾಗಿ ವಿಸ್ತರಿಸಲು ಮುಂದಾಗಿದೆ. ಕಂಪನಿಯು ಹೈದರಾಬಾದ್, ಕೊಚ್ಚಿ, ಅಹಮದಾಬಾದ್, ಕೋಲ್ಕತಾ ಹಾಗೂ ಕೊಯಮತ್ತೂರು ನಗರಗಳಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲಿದೆ.

ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಎಥರ್ , ಎರಡು ವರ್ಷಗಳ ಹಿಂದೆ ಎಥರ್ 450 ಸ್ಕೂಟರ್ ಅನ್ನು ಬಿಡುಗಡೆಗೊಳಿಸಿತ್ತು. ಈ ಎರಡು ವರ್ಷಗಳಲ್ಲಿ ಎಥರ್ 450 ಎಕ್ಸ್ ರೂಪದಲ್ಲಿ ಹೊಸ ಸ್ಕೂಟರ್‌ಗಳನ್ನು ಬಿಡುಗಡೆಗೊಳಿಸಿದೆ.

ಎಥರ್ ಕಂಪನಿಯು ತನ್ನ ಎಥರ್ 350 ಸ್ಕೂಟರ್‌ ಅನ್ನು ಸ್ಥಗಿತಗೊಳಿಸಿದೆ. ಕಂಪನಿಯು ಇನ್ನು ಆರು ತಿಂಗಳಲ್ಲಿ ಎಥರ್ 450 ಪ್ಲಸ್ ಸ್ಕೂಟರ್ ಅನ್ನು ಬಿಡುಗಡೆಗೊಳಿಸಲಿದೆ. ಕಂಪನಿಯು ಹೊಸೂರಿನಲ್ಲಿ 4,00,000 ಚದರ ಅಡಿ ಉತ್ಪಾದನಾ ಘಟಕವನ್ನು ಆರಂಭಿಸಲಿದೆ.

Category

🗞
News
Be the first to comment
Add your comment

Recommended