ಸ್ಕೋಡಾ ಕಂಪನಿಯು ತನ್ನ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ನೀಡಿದೆ. ಜೆಕ್ ಮೂಲದ ಕಾರು ತಯಾರಕ ಕಂಪನಿಯು ಭಾರತದಲ್ಲಿ ಮೂರು ಕಾರುಗಳನ್ನು ಬಿಡುಗಡೆಗೊಳಿಸಿದೆ. ಇವುಗಳಲ್ಲಿ ಸೂಪರ್ಬ್ ಫೇಸ್‌ಲಿಫ್ಟ್ ಕಾರಿನ ಬೆಲೆ ರೂ.29.99 ಲಕ್ಷಗಳಿಂದ ಆರಂಭವಾದರೆ, ಕರೋಕ್ ಎಸ್‌ಯುವಿಯ ಬೆಲೆ ರೂ.24.99 ಲಕ್ಷಗಳಿಂದ ಆರಂಭವಾಗುತ್ತದೆ. ಇನ್ನು 2020ರ ರಾಪಿಡ್ ಕಾರಿನ ಬೆಲೆ ರೂ.7.49 ಲಕ್ಷಗಳಿಂದ ಆರಂಭವಾಗುತ್ತದೆ.
2020ರ ಸೂಪರ್ಬ್ ಫೇಸ್‌ಲಿಫ್ಟ್ ಕಾರು ಹೊಸ ವಿನ್ಯಾಸ, ಫೀಚರ್, ಇಂಟಿರಿಯರ್ ಹಾಗೂ ಎಕ್ಸ್‌ಟಿರಿಯರ್‌ನಲ್ಲಿ ಹಲವಾರು ಸೂಕ್ಷ್ಮ ಬದಲಾವಣೆಗಳು ಹಾಗೂ ಅಪ್‌ಡೇಟ್‌ಗಳನ್ನು ಹೊಂದಿದೆ. ಹೊಸ ಕಾರು ಹೊಸ ಸೆಟ್ ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್‌ಲ್ಯಾಂಪ್, ಅಪ್‌ಡೇಟ್ ಮಾಡಲಾದ ಫ್ರಂಟ್ ಬಂಪರ್, ಟ್ವಿನ್ ಸ್ಲ್ಯಾಟ್‌ಗಳನ್ನು ಹೊಂದಿರುವ ದೊಡ್ಡ ಬಟರ್‌ಫ್ಲೈ ಗ್ರಿಲ್‌ಗಳನ್ನು ಹೊಂದಿದೆ.
Be the first to comment