ಕಿಯಾ ಮೋಟಾರ್ಸ್ ಆಂಧ್ರಪ್ರದೇಶದ ಅನಂತಪುರದಲ್ಲಿರುವ ತನ್ನ ಉತ್ಪಾದನಾ ಘಟಕದಲ್ಲಿ ಉತ್ಪಾದನಾ ಕಾರ್ಯಾಚರಣೆಯನ್ನು ಪುನರಾರಂಭಿಸಿರುವುದಾಗಿ ತಿಳಿಸಿದೆ. ದೇಶಿಯ ಮಾರುಕಟ್ಟೆ ಹಾಗೂ ಅಂತರ್‌ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಾಕಿ ಉಳಿದಿರುವ ಬುಕ್ಕಿಂಗ್‌ಗಳನ್ನು ಮೊದಲು ತೆರವುಗೊಳಿಸುವುದಾಗಿ ಕಂಪನಿ ತಿಳಿಸಿದೆ.
ಕಿಯಾ ಮೋಟಾರ್ಸ್ 2020ರ ಮೇ 8ರಂದು ತನ್ನ ಉತ್ಪಾದನಾ ಘಟಕವನ್ನು ಪುನರಾರಂಭಿಸಿತು. ಕಂಪನಿಯು ಒಂದು ಪಾಳಿಯಲ್ಲಿ ಮಾತ್ರ ಉತ್ಪಾದನೆಯನ್ನು ಆರಂಭಿಸಿದ್ದು, COVID-19 ಸಾಂಕ್ರಾಮಿಕ ರೋಗವು ಕಡಿಮೆಯಾದ ನಂತರ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಲಿದೆ.
ಲಾಕ್‌ಡೌನ್ ಕಾರಣಕ್ಕೆ ಕಿಯಾ ಮೋಟಾರ್ಸ್‌ನ ಅನಂತಪುರ ಘಟಕವನ್ನು ಮಾರ್ಚ್ 23ರಿಂದ ಸ್ಥಗಿತಗೊಳಿಸಲಾಗಿತ್ತು. ಲಾಕ್‌ಡೌನ್ ಅವಧಿಯನ್ನು ವಿಸ್ತರಿಸಲಾಗಿದ್ದರೂ, ಕೆಲವು ವಿನಾಯಿತಿ ನೀಡಲಾಗಿರುವ ಕಾರಣಕ್ಕೆ ಬಹುತೇಕ ಆಟೋ ಮೊಬೈಲ್ ಕಂಪನಿಗಳು ತಮ್ಮ ಕಾರ್ಯಾಚರಣೆಯನ್ನು ಪುನರಾರಂಭಿಸಿವೆ.
Be the first to comment