Skip to playerSkip to main content
  • 8 years ago
ಸ್ಯಾಂಡಲ್ ವುಡ್ ನಲ್ಲಿ ಮತ್ತೊಂದು ಲವ್ ಸೆಕ್ಸ್ ದೋಖಾ ಪ್ರಕರಣ ಕಂಡು ಬಂದಿದೆ. 'ಐ ಲವ್ ಯೂ' ಎಂಬ ಸಿನಿಮಾದ ನಾಯಕಿ ರಾಧಿಕಾ ಶೆಟ್ಟಿಗೆ ಅದೇ ಚಿತ್ರದ ಸಹ ನಟ ಅಮಿತ್ ವಂಚನೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಈಗಾಗಲೇ ರಾಧಿಕಾ ಶೆಟ್ಟಿ ರಾಜರಾಜೇಶ್ವರಿ ನಗರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಟ ಅಮಿತ್ ಮತ್ತು ನಟಿ ರಾಧಿಕಾ ಶೆಟ್ಟಿ ಇಬ್ಬರು 2013ರಲ್ಲಿ ಮದುವೆ ಆಗಿದ್ದರು. ಸಿನಿಮಾದ ಚಿತ್ರೀಕರಣದ ವೇಳೆ ಪರಸ್ಪರ ಪ್ರೀತಿ ಮೂಡಿದ್ದು, ಸಿಗಂದೂರು ಚೌಡೇಶ್ವರಿ ದೇವಾಲಯದಲ್ಲಿ ವಿವಾಹ ಆಗಿದ್ದರಂತೆ. ಆದರೆ ಮದುವೆ ಆಗಿ 4 ವರ್ಷದ ಬಳಿಕ ಈಗ ಅಮಿತ್ ಕೈ ಕೊಟ್ಟಿದ್ದಾನೆ. ಎಂದು ರಾಧಿಕಾ ಶೆಟ್ಟಿ ಆರೋಪ ಮಾಡಿದ್ದಾರೆ.ನಟಿ ರಾಧಿಕಾ ಶೆಟ್ಟಿಗೆ ಈ ಹಿಂದೆಯೇ ಒಂದು ಮದುವೆ ಆಗಿದ್ದು, ಅವರ ಪತಿ ನಿಧನರಾಗಿದ್ದರು. ಆ ಬಳಿಕ ಅಮಿತ್ ಜೊತೆ ರಾಧಿಕಾ ಎರಡನೇ ಮದುವೆ ಅಗಿದ್ದರು.
'I Love You' kannada movie actress Radhika Shetty gave complaint against actor Amith in Rajarajeshwari police station Bengaluru.

Category

🎵
Music
Be the first to comment
Add your comment

Recommended