Skip to playerSkip to main contentSkip to footer
  • 8 years ago
ಕಿರುತೆರೆಯ ಪ್ರತಿಭೆಗಳು ಹಿರಿತೆರೆಗೆ ಬರುವುದು ಸಾಮಾನ್ಯ. ನಟಿ ರಾಧಿಕಾ ಪಂಡಿತ್, ರಚಿತಾ ರಾಮ್ ಸೇರಿದಂತೆ ಕನ್ನಡದ ಅನೇಕ ಸ್ಟಾರ್ ನಟಿಯರು ಮೊದಲು ಸೀರಿಯಲ್ ನಲ್ಲಿ ಮಿಂಚಿದ್ದರು. ಈಗ ಮತ್ತೊಂದು ಧಾರಾವಾಹಿಯ ಪ್ರತಿಭೆ ಸಿನಿಮಾರಂಗ ಪ್ರವೇಶ ಮಾಡಿದೆ.

'ಜೀ ಕನ್ನಡ' ವಾಹಿನಿ ನೋಡುಗರಿಗೆ 'ಜೋಡಿ ಹಕ್ಕಿ' ಧಾರಾವಾಹಿ ಬಲು ಇಷ್ಟದ ಸೀರಿಯಲ್. ಅದರಲ್ಲಿ ಜಾನಕಿ ಟೀಚರ್ ಅಂದರೆ ಎಲ್ಲರಿಗೂ ಅಚ್ಚು ಮೆಚ್ಚು. ಜಾನಕಿ ಟೀಚರ್ ಸೌಂದರ್ಯ ಅವರ ಸಹಜ ನಟನೆ ಧಾರಾವಾಹಿಯ ಹೈಲೆಟ್. ಈ ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಹೆಸರು ಮಾಡಿದ್ದ ಜಾನಕಿ ಟೀಚರ್ ಅಂದರೆ ಚೈತ್ರ ರಾವ್ ಅವರು ಈಗ ಬೆಳ್ಳಿ ಪರದೆ ಮೇಲೆ ಮೋಡಿ ಮಾಡಲು ಸಜ್ಜಾಗಿದ್ದಾರೆ. ಅದು ಕೂಡ ನಟ ಪುನೀತ್ ರಾಜ್ ಕುಮಾರ್ ಅವರ ಸಿನಿಮಾದಲ್ಲಿ ಎನ್ನುವುದು ವಿಶೇಷ.

Kannada serial actress, 'Jodi Hakki' fame Chaitra Rao playing lead role in kannada actor Puneeth Rajkumar's Maya Bazaar movie.

Category

🗞
News
Be the first to comment
Add your comment

Recommended