ನಾಸಾ : ಬಾಹ್ಯಾಕಾಶದಿಂದ ಕ್ಲಿಕ್ಕಿಸಿದ ಬುವಿ ಅಂತರಿಕ್ಷದ ಅದ್ಭುತ ಚಿತ್ರಗಳು | Oneindia Kannada

  • 6 years ago
Unique photos of Earth taken by NASA. Rare and stunning photos of earth and space taken by various satellites and astronauts. Canada, China, Morocco, Australia different part of the world pictures are here.

ದೂರದಿಂದ ನಿಂತು ನಮ್ಮ ಮನೆಯನ್ನೇ ನೋಡಿದರೆ ಹೇಗೆ ಕಾಣುತ್ತದೆ, ನಾವೇ ನಡೆದು ಸಾಗುವಾಗ ಹೇಗೆ ಕಾಣ್ತೀವಿ ಅನ್ನೋ ಕುತೂಹಲ...ಇವೆಲ್ಲ ತುಂಬ ಸಹಜವಾದದ್ದು. ಅಮೆರಿಕದ ನಾಸಾದ ಉಪಗ್ರಹಗಳು ಭೂಮಿ ಆಚೆಗಿನ ವಿಷಯಗಳನ್ನು ಅಧ್ಯಯನ ನಡೆಸುತ್ತಿವೆ. ಜತೆಗೆ ಅಲ್ಲಿಂದ ನಮ್ಮ ಭೂಮಿ ಹೇಗೆ ಕಾಣುತ್ತಿದೆ ಎಂಬ ಬಗ್ಗೆ ವಿಜ್ಞಾನಿಗಳಿಗೆ ಮಾಹಿತಿ ಕೂಡ ನೀಡುತ್ತವೆ.ಕೆಲ ಸಲ ನೀವು ವಿಜ್ಞಾನ ಹಾಗೂ ಕಲೆಯನ್ನು ಬೇರೆ ಬೇರೆ ಅಂತ ನೋಡಲು ಸಾಧ್ಯವಲ್ಲ. ಕಳೆದ ನವೆಂಬರ್ ನಲ್ಲಿ ಜಾಗತಿಕ ಹವಾಮಾನ ಬದಲಾವಣೆ ತಂಡವು ಕೆಲವು ಅದ್ಭುತ ಫೋಟೋಗಳನ್ನು ಬಿಡೂಗಡೆ ಮಾಡಿದೆ. ಇವುಗಳನ್ನು ಸೆರೆ ಹಿಡಿದಿರುವುದು ಉಪಗ್ರಹಗಳು ಹಾಗೂ ಗಗನಯಾತ್ರಿಗಳು ಎಂಬುದು ನೆನಪಿನಲ್ಲಿಡಬೇಕಾದ ಅಂಶ.ಈ ಚಿತ್ರಗಳ ಬಣ್ಣಗಳು ತಪ್ಪಾಗಿರಬಹುದು ಅಥವಾ ಕ್ಷಣಿಕ ಆಗಿರಬಹುದು. ಆದರೆ ವಿಜ್ಞಾನಿಗಳು ಬಹಿರಂಗ ಪಡಿಸಿದ ಚಿತ್ರಗಳಾಗಲಿ, ಮಾಹಿತಿಗಳಾಗಲಿ ಬರಿಗಣ್ಣಿಗೆ ಗೋಚರಿಸುವಂಥದ್ದಲ್ಲ. ಅಂಥ ಅದ್ಭುತ ಹಾಗೂ ಸಾಮಾನ್ಯಕ್ಕೆ ಗೋಚರವಾಗದ ಚಿತ್ರಗಳ ಗುಚ್ಛ ಇಲ್ಲಿದೆ. ಇವು ಬೆರಗು ಮಾತ್ರವಲ್ಲ, ನಮಗೆ ಸುಲಭಕ್ಕೆ ನಿಲುಕದ ರಹಸ್ಯವೂ ಹೌದು.

Recommended