ಬಳ್ಳಾರಿ, ಫೆಬ್ರವರಿ 04: ಬಳ್ಳಾರಿ ಜಿಲ್ಲೆಯ ಐತಿಹಾಸಿಕ ಸುಕ್ಷೇತ್ರ ಮೈಲಾರಲಿಂಗೇಶ್ವರನ ಕಾರ್ಣಿಕೋತ್ಸವ ನುಡಿ ಹೊರಬಿದ್ದಿದೆ. ಈ 'ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್' ಎನ್ನುವುದು ಈ ಬಾರಿ ಗೊರವಪ್ಪ ಕಾರ್ಣಿಕ ನುಡಿದಿದ್ದಾನೆ. ಹೌದು, ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದಲ್ಲಿ 'ಆಕಾಶದ ಕೆಳಗೆ ಗಿಳಿ ಕುಂತಿತ್ತಲೇ ಪರಾಕ್' ಎಂದು ಗೊರವಪ್ಪ ನುಡಿದ. ಆದರೆ ಆರಂಭದಲ್ಲಿ ಇದು ಅಲ್ಲಿ ನೆರೆದಿದ್ದ ಭಕ್ತರ ಗದ್ದಲದಿಂದಾಗಿ ಬೇರೆಯ ರೀತಿಯಲ್ಲಿ ಅರ್ಥೈಸಲಾಗಿತ್ತು.
Be the first to comment