ನಾನು ನಾಸ್ತಿಕ, ದೇವಾಲಯಕ್ಕೆ ಹೋಗುವುದಿಲ್ಲ ಎಂದು ಎಲ್ಲೂ ಹೇಳಿಕೊಂಡು ಬಂದಿಲ್ಲ. ಉಪವಾಸ ಮಾಡಿಕೊಂಡು ದೇವಾಲಯಕ್ಕೆ ಬಾ, ಮಾಂಸ ತಿಂದು ದೇವಾಲಯಕ್ಕೆ ಬರಬೇಡ ಎಂದು ದೇವರೆಲ್ಲೂ ಹೇಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನಗರದಲ್ಲಿ ಸೋಮವಾರ (ಅ 30) ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು, ವೀರೇಂದ್ರ ಹೆಗ್ಗಡೆಯವರು ದೇವರ ದರ್ಶನ ಮಾಡಿಕೊಂಡು ಹೋಗಿ ಎಂದು ಹೇಳಿದರು, ಅವರ ಮಾತಿಗೆ ಬೆಲೆಕೊಡಲು ನಾನು ದೇವಸ್ಥಾನಕ್ಕೆ ಹೋಗಿದ್ದೆ. ಅಂದು ಮಧ್ಯಾಹ್ನ ಮೀನು ಮಾತ್ರ ಯಾಕೆ ಕೋಳಿನೂ ತಿಂದು ಧರ್ಮಸ್ಥಳ ದೇವಾಲಯಕ್ಕೆ ಹೋಗಿದ್ದೆ. ಮಾಂಸ ತಿಂದು ಹೋದರೆ ದೇವರು ಅಪವಿತ್ರ ಆಗ್ಬಿಡ್ತಾನಾ ಎಂದು ಸಿದ್ದರಾಮಯ್ಯ ಪ್ರಶ್ನಿಸುವ ಮೂಲಕ, ಈ ವಿವಾದವನ್ನು ಮತ್ತೆ ಜೀವಂತವಾಗಿಸಿದ್ದಾರೆ.ಮೈಸೂರಿನಿಂದ ಸಿಎಂ ಸಿದ್ದರಾಮಯ್ಯ ನೇರವಾಗಿ ಹೆಲಿಕಾಪ್ಟರ್ ಮೂಲಕ ಚಿಕ್ಕಬಳ್ಳಾಪುರಕ್ಕೆ ಆಗಮಿಸಿ. ತಾಲೂಕಿನ ಮಂಚನಬಲೆ ಗ್ರಾಮದ ಬಿರೇಶ್ವರ ಸ್ವಾಮಿ ದೇಗುಲದ ಉದ್ಘಾಟನೆ ನಡೆಸಿ, ರಾಜ್ಯದಲ್ಲಿ ಭಾರೀ ಚರ್ಚೆಯ ವಿಷಯವಾಗಿರುವ ಧರ್ಮಸ್ಥಳ ವಿವಾದದ ಬಗ್ಗೆ ಮಾತನಾಡಿದರು.
Be the first to comment