Skip to playerSkip to main content
  • 8 years ago
ಶ್ರೀಕೃಷ್ಣನ ನಗರಿ ಉಡುಪಿಯಲ್ಲೀಗ ಪರ್ಯಾಯ ಮಹೋತ್ಸವದ ಸಂಭ್ರಮ. ಇದೇ ಬರುವ ಜನವರಿ ಹದಿನೆಂಟರ ಮುಂಜಾನೆ, ಎರಡನೇ ಬಾರಿಗೆ ಪಲಿಮಾರು ಮಠದ ಶ್ರೀವಿದ್ಯಾಧೀಶ ತೀರ್ಥರು ಶ್ರೀಕೃಷ್ಣಮಠದ ಸರ್ವಜ್ಞಪೀಠವನ್ನು ಏರಲಿದ್ದಾರೆ. ಆಚಾರ್ಯ ಮಧ್ವರು ಶ್ರೀಕೃಷ್ಣನ ಪೂಜೆಗೆ ನೇಮಿಸಿದ್ದ ಅಷ್ಠಮಠಗಳ ಪೈಕಿ ಒಂದಾದ ಪಲಿಮಾರು ಮಠದ ಮೂಲ ಉಡುಪಿಯಿಂದ ಸುಮಾರು ಮೂವತ್ತು ಕಿ.ಮೀ ದೂರದ ಪಲಿಮಾರಿನಲ್ಲಿ. ಮಠದ ಗುರುಪರಂಪರೆಯ ಮೂವತ್ತನೇ ಯತಿಗಳಾಗಿರುವ ವಿದ್ಯಾಧೀಶ ತೀರ್ಥರ ಪೂರ್ವಾಶ್ರಮದ ಹೆಸರು ರಮೇಶ್ ತಂತ್ರಿ. ಪಲಿಮಾರು ಶ್ರೀಗಳ ವೈಭವದ ಪುರಪ್ರವೇಶ 2002-2004ರಲ್ಲಿ ಮೊದಲ ಬಾರಿಗೆ ಪರ್ಯಾಯ ಪೀಠವನ್ನೇರಿದ್ದ ವಿದ್ಯಾಧೀಶ ತೀರ್ಥರು, ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಶ್ರೀಕೃಷ್ಣನಿಗೆ ವಜ್ರಖಚಿತ ಕಿರೀಟ, 108ಶಾಲೆಯ ಮಕ್ಕಳಿಗೆ ಚಿಣ್ಣರ ಶ್ರುಶೂಷೆ, ಮಧ್ವಸರೋವರ ಸ್ವಚ್ಚಗೊಳಿಸುವುದು, ಶ್ರೀಕೃಷ್ಣ ಟೆಕ್ನಿಕಲ್ ಸೆಂಟರ್ ಆರಂಭ, ಮುಂತಾದ ಕೆಲಸಗಳನ್ನು ಮೊದಲ ಅವಧಿಯಲ್ಲಿ ಮಾಡಿದ್ದರು.

Category

🗞
News
Be the first to comment
Add your comment

Recommended