ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಭಾಯ್ ಪಟೇಲ್ ಗೆ ಬಿಜೆಪಿ ಬಿಡಿ ಎಂದ ಹಾರ್ದಿಕ್ ಪಟೇಲ್ | Oneindia Kannada

  • 6 years ago
Nitinbhai Patel can join us if the BJP is not giving him respect. He has worked hard for the party. Hardik told media persons on Saturday.

ಬಿಜೆಪಿ ಮೇಲೆ ಜಿದ್ದಿಗೆ ಬಿದ್ದಿರುವ ಪಾಟೀದಾರ್ ಅನಾಮತ್ ಹೋರಾಟ ನಾಯಕ ಹಾರ್ದಿಕ್ ಪಟೇಲ್ ಗುಜರಾತ್ ನಲ್ಲಿ ಬಿಜೆಪಿ ಸರ್ಕಾರ ಬೀಳಿಸಲು ಹೊಸ ತಂತ್ರ ಹೂಡಿದ್ದಾರೆ. ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ತಮ್ಮ ಹತ್ತು ಬೆಂಬಲಿಗ ಶಾಸಕರೊಂದಿಗೆ ಪಕ್ಷ ತ್ಯಜಿಸಿ ಬಂದರೆ ನಾನು ಕಾಂಗ್ರೆಸ್ ಜೊತೆ ಮಾತನಾಡಿ ಅವರಿಗೆ ಉತ್ತಮ ಸ್ಥಾನ ಕೊಡಿಸುವ ಜವಾಬ್ದಾರಿ ಹೊರುತ್ತೇನೆ ಎಂದಿದ್ದಾರೆ.ನಿತಿನ್ ಪಟೇಲ್ ಗೆ ಬಿಜೆಪಿಯಲ್ಲಿ ಗೌರವ ಸಿಗುತ್ತಿಲ್ಲ ಎಂದಮೇಲೆ ಅವರು ನಮ್ಮ ಜೊತೆ (ಪಾಟೀದಾರ್ ಅನಾಮತ್) ಕೈಜೋಡಿಸಬಹುದು' ಎಂದು ಅವರು ಹೇಳಿದ್ದಾರೆ.ಖಾತೆ ಹಂಚಿಕೆ ಬಗ್ಗೆ ನಿತಿನ್ ಪಟೇಲ್ ಅಸಮಾಧಾನ ಹೊಂದಿದ್ದು, ಅವರು ಇನ್ನೂ ತಮಗೆ ನೀಡಿರುವ ಖಾತೆಯನ್ನು ಅಧಿಕೃತವಾಗಿ ವಹಿಸಿಕೊಂಡಿಲ್ಲ, ಗಾಂಧಿನಗರದಲ್ಲಿ ನಡೆದ ಪದವಿ ಸ್ವೀಕಾರ ಸಮಾರಂಭಕ್ಕೂ ಅವರು ಗೈರಾಗಿದ್ದರು. ಹೀಗಾಗಿ ಹಾರ್ದಿಕ್ ಪಟೇಲ್ ಈ ಸಮಯದ ಲಾಭ ಪಡೆಯಲು ಮುಂದಾಗಿದ್ದಾರೆ.

Recommended