ಹಾರ್ದಿಕ್ ಪಟೇಲ್ ಈಗ ಗುಜರಾತ್ ಪಾಟೀದಾರರ ಕಣ್ಮಣಿ | Oneindia Kannada

  • 6 years ago
ಹಾರ್ದಿಕ್ ಪಟೇಲ್ ಬೆಂಬಲ ನೀಡಿದರೂ ಗುಜರಾತ್ ನಲ್ಲಿ ಕಾಂಗ್ರೆಸ್ ಮತ್ತೆ ಮಕಾಡೆ ಮಲಗಿದೆ. ಆದರೆ ಪಟೇಲ್ ಸಮುದಾಯದ ಕಣ್ಮಣಿಯಾಗಿ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ ಸಂಚಾಲಕ ಹಾರ್ದಿಕ್ ಪಟೇಲ್ ಮೂಡಿ ಬಂದಿದ್ದಾರೆ. ಒಂದು ಕಾಲದಲ್ಲಿ ಪಟೇಲ್ ಸಮುದಾಯದ ಮೇರು ನಾಯಕನಾಗಿ ಗುರುತಿಸಿಕೊಂಡಿದ್ದವರು ಬಿಜೆಪಿಯ ಕೇಶುಭಾಯ್ ಪಟೇಲ್. ಸದ್ಯ ಅದೇ ಜಾಗಕ್ಕೆ ಹಾರ್ದಿಕ್ ಪಟೇಲ್ ಲಗ್ಗೆ ಹಾಕಿದ್ದಾರೆ. ಲಕ್ಷ ಲಕ್ಷ ಜನರನ್ನು ಸೇರಿಸಿ ಕಾಂಗ್ರೆಸ್ ಪರವಾಗಿ ಸಮಾವೇಶಗಳನ್ನು ನಡೆಸಿದ ಹಾರ್ದಿಕ್ ಪಟೇಲ್ ಗುಜರಾತ್ ಚುನಾವಣೆಯ ಹಿನ್ನಲೆಯಲ್ಲಿ ಅಕ್ಷರಶಃ ತಮ್ಮ ಶಕ್ತಿ ಪ್ರದರ್ಶನ ನಡೆಸಿದ್ದರು. ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿಯ ರಾಜಕೋಟ್ ಪಶ್ಚಿಮ ಕ್ಷೇತ್ರ ಸೇರಿದಂತೆ ಬಿಜೆಪಿ ಶಕ್ತಿಕೇಂದ್ರಗಳಲ್ಲೇ ಹಾರ್ದಿಕ್ ಪಟೇಲ್ ತಮ್ಮ ಸಾಮರ್ಥ್ಯ ತೆರೆದಿಟ್ಟಿದ್ದರು. ಇವತ್ತು ಹಾರ್ದಿಕ್ ಪಟೇಲ್ ಗೆ ಚುನಾವಣೆಗೆ ನಿಲ್ಲುವಷ್ಟು ವಯಸ್ಸಾಗದೇ ಇರಬಹುದು. ಅವರು ಚುನಾವಣೆಯಿಂದ ದೂರವೂ ಉಳಿದಿರಬಹುದು. ಆದರೆ ತಮಗಿರುವ ಜನಪ್ರಿಯತೆಯನ್ನು ಹೀಗೆ ಮುಂದುವರಿಸಿದಲ್ಲಿ ಭವ್ಯ ರಾಜಕೀಯ ಭವಿಷ್ಯ ಅವರಿಗಿದೆ.

Recommended