Skip to playerSkip to main contentSkip to footer
  • 12/14/2017
ಅಹಮದಾಬಾದ್, ಡಿಸೆಂಬರ್ 14: ಈ ಬಾರಿಯ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಗೆ ನೈಜ ಸವಾಲು ಹಾಕಿದವರು ಪಾಟೀದಾರ್ ನಾಯಕ ಹಾರ್ದಿಕ್ ಪಟೇಲ್. ಲಕ್ಷ ಲಕ್ಷ ಜನರ ಸಮಾವೇಶಗಳನ್ನು ನಡೆಸಿ ಸ್ವತಃ ಮೋದಿಗೆ ನಡುಕ ಹುಟ್ಟಿಸಿದ ಹಾರ್ದಿಕ್ ಪಟೇಲ್ ಚುನಾವಣೆಗೆ ಯಾಕೆ ನಿಂತಿಲ್ಲ ಎಂಬ ಪ್ರಶ್ನೆ ನಿಮ್ಮನ್ನೂ ಕಾಡಿರಬಹುದು. ಅದಕ್ಕೆ ಸ್ವತಃ ಅವರೇ ಉತ್ತರಿಸಿದ್ದಾರೆ.ಗುಜರಾತ್ ನಲ್ಲಿ ಇಂದು ತಮ್ಮ ಮತ ಚಲಾಯಿಸಿದ ಹಾರ್ದಿಕ್ ಪಟೇಲ್ ಚುನಾವಣೆಗೆ ಯಾಕೆ ನಿಂತಿಲ್ಲ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ್ದಾರೆ. "ನನಗೆ ಮೊದಲು ವಯಸ್ಸಾಗಲಿ ನಂತರ ಬರುತ್ತೇನೆ," ಎಂದಿದ್ದಾರೆ. 23 ತರುಣ ಹಾರ್ದಿಕ್ ಪಟೇಲ್ ಗೆ ಚುನಾವಣೆಗೆ ನಿಲ್ಲಲು ಅರ್ಹತೆಯಿಲ್ಲ (ಚುನಾವಣೆಗೆ ನಿಲ್ಲಲು 25 ವರ್ಷವಾಗಿರಬೇಕು). ಹೀಗಿದ್ದೂ ಗುಜರಾತಿನಲ್ಲಿ ಚುನಾವಣಾ ದೃಷ್ಟಿಯಿಂದ ಪ್ರಭಾವ ಬೀರಿದ ಪ್ರಮುಖ ವ್ಯಕ್ತಿಯಾಗಿ ಹಾರ್ದಿಕ್ ಪಟೇಲ್ ಗುರುತಿಸಿಕೊಂಡಿದ್ದಾರೆ. "ನಾನೀಗಾಗಲೇ ಹೇಳಿರುವಂತೆ ನಾನು ಈ ಬಗ್ಗೆ (ಚುನಾವಣೆಗೆ ಸ್ಪರ್ಧಿಸುವ ಬಗ್ಗೆ) ಎರಡೂವರೆ ವರ್ಷಗಳಲ್ಲಿ ಆಲೋಚನೆ ಮಾಡಿ ನಿರ್ಧರಿಸುತ್ತೇನೆ," ಎಂದು ಹಾರ್ದಿಕ್ ಸ್ಪಷ್ಟಪಡಿಸಿದಿದ್ದಾರೆ.
23-year-old Hardik Patel is not eligible to contest elections (25 years is must to stand for elections). “let me first come of age," said Hardik after reporters questioned about his future

Category

🗞
News

Recommended