ಗುಜರಾತ್ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದಿಲ್ಲ, ಅಂದ್ರು ಹಾರ್ದಿಕ್ ಪಟೇಲ್ | Oneindia Kannada

  • 6 years ago
Patidar Anamat Andolan Samiti (PAAS) leader Hardik Patel has trashed the exit poll survey by various agencies and has stated that there is no chance that BJP will win the Gujarat assembly elections. All the exit polls have predicted landslide victory for BJP.


"ಗುಜರಾತ್ ನಲ್ಲಿ ಚುನಾವಣೋತ್ತರ ಸಮೀಕ್ಷೆಗಳು ಏನೇ ಹೇಳಲಿ, ಎಂಥದೇ ಫಲಿತಾಂಶ ನೀಡಲಿ, ಭಾರತೀಯ ಜನತಾ ಪಕ್ಷ ಯಾವುದೇ ಕಾರಣಕ್ಕೂ ಬಹುಮತ ಪಡೆಯುವುದಿಲ್ಲ, ಅಧಿಕಾರಕ್ಕೆ ಬರುವುದಿಲ್ಲ!" ಹೀಗೆಂದು ಅತ್ಯಂತ ಖಡಾಖಂಡಿತವಾಗಿ ನುಡಿದವರು ಪಾಟಿದಾರ್ ಅನಾಮತ್ ಆಂದೋಲನ ಸಮಿತಿಯ ಅಧ್ಯಕ್ಷ, ಭಾರತೀಯ ಜನತಾ ಪಕ್ಷದ ಪಾಲಿನ ಮುಳ್ಳಾಗಿರುವ ಯುವ ನಾಯಕ ಹಾರ್ದಿಕ್ ಪಟೇಲ್. ಡಿಸೆಂಬರ್ 18ರವರೆಗೆ ಕಾದು ನೋಡಿ, ಏನಾಗುತ್ತದೆಂದು ಎಂದು ಸವಾಲು ಎಸೆದಿದ್ದಾರೆ.ಎಬಿಪಿ ನ್ಯೂಸ್, ಇಂಡಿಯಾ ಟುಡೆ, ಸಿವೋಟರ್, ನ್ಯೂಸ್ ನೇಷನ್, ಇಂಡಿಯಾ ಟಿವಿ, ಟೈಮ್ಸ್ ನೌ ವಿಎಂಆರ್, ರಿಪಬ್ಲಿಕ್ ಟಿವಿ, ಚಾಣಕ್ಯ ಮುಂತಾದ ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆಯ ತಲೆಯ ಮೇಲೆ ಬಾರಿಸಿದಂತೆ ಹಾರ್ದಿಕ್ ಪಟೇಲ್, ಬಿಜೆಪಿ ಗೆಲ್ಲುವುದಿಲ್ಲ ಎಂದು ಘಂಟಾಷೋಷವಾಗಿ ಸಾರಿದ್ದಾರೆ.ಎಲೆಕ್ಟ್ರಾನಿಕ್ ವೋಟಿಂಗ್ ಮಷೀನ್ ನಲ್ಲಿರುವ ದೋಷದ ಲಾಭ ಪಡೆದಿರುವುದು ಈ ಚುನಾವಣೋತ್ತರ ಸಮೀಕ್ಷೆಗಳಿಂದ ಸಾಬೀತಾಗಿದೆ ಎಂದು ಕೆಂಡ ಕಾರಿದ್ದಾರೆ. ಚುನಾವಣೆಯನ್ನು ನ್ಯಾಯಯುತವಾಗಿ ನಡೆಸಿದ್ದರೆ ಬಿಜೆಪಿ ಗೆಲ್ಲುವ ಸಾಧ್ಯತೆಯೇ ಇದ್ದಿದ್ದಿಲ್ಲ ಎಂದು ಹಾರ್ದಿಕ್ ಹೇಳಿಕೆ ನೀಡಿದ್ದಾರೆ.

Recommended