ಗುಜರಾತ್ ನಲ್ಲಿ ದಲಿತರ ಪರ ದನಿ ಎತ್ತೋ ಜಿಗ್ನೇಶ್ ಮೇವಾನಿ ಇದೀಗ ಗುಜರಾತ್ ಎಲೆಕ್ಷನ್ ಫಲಿತಾಂಶದ ಬಳಿಕ ಪ್ರಧಾನಿ ಮೋದಿಯವರಿಗೆ ತಮ್ಮ ತೀಕ್ಷ್ಣ ಪದಗಳಿಂದ ಟೀಕೆ ಮಾಡಿದ್ದಾರೆ . ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗುಜರಾತ್‌ನ ನೂತನ ಶಾಸಕ ಜಿಗ್ನೇಶ್ ಮೇವಾನಿ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ಭಾರಿ ವಿವಾದ ಸೃಷ್ಟಿಸಿದೆ . ೧೫೦ ಸೀಟ್ ಗಳನ್ನ ಗೆದ್ದೇ ಗೆಲ್ಲುವೆ ಎಂದು ಟಿವಿ ಚಾನೆಲ್ ಗಳ ಮುಂದೆ ಹೇಳಿಕೊಂಡು ಗರ್ವದಿಂದ ಬೀಗುತ್ತಿದ್ದ ಮೋದಿಯವರಿಗೆ ಈಗ ಗರ್ವ ಒಡೆದು ನುಚ್ಚು ನೂರಾಗಿದೆ . ಅವರು ದೇಶದ ಜನರನ್ನು ತಮ್ಮ ಮಾತುಗಳಿಂದ ಬೋರು ಹೊಡೆಸುವುದನ್ನು ನಿಲ್ಲಿಸಿ ಹಿಮಾಲಯಕ್ಕೆ ಹೋಗಿ ಯಾವುದಾದರೂ ರಾಮ ಮಂದಿರಕ್ಕೆ ಹೋಗಿ ಗಂಟೆ ಹೊಡೆಯಿರಿ ಎಂದಿದ್ದಾರೆ ಜಿಗ್ನೇಶ್ ಮೇವಾನಿ . ಒಟ್ಟಾರೆ ಜಿಗ್ನೇಶ್ ಮೇವಾನಿ , ಹಾರ್ದಿಕ್ ಪಟೇಲ್ ರಂತಹ ಯುವ ನಾಯಕರು ರಾಜಕೀಯ ಪ್ರವೇಶಿಸಿರುವುದು ಮೋದಿಯವರ ಹವಾ ಕಡಿಮೆ ಮಾಡಿರುವುದಂತೂ ಹೌದು .
Jignesh mevani after emerging as a winner at Vedgam in recent Gujarat elections has sent a strong message to Prime minister Modi