Skip to playerSkip to main contentSkip to footer
  • 12/9/2017
ನಟ ಪುನೀತ್ ರಾಜ್ ಕುಮಾರ್ ತಮ್ಮದೇಯಾದ ಸಿನಿಮಾ ನಿರ್ಮಾಣ ಸಂಸ್ಥೆಯನ್ನ ಪ್ರಾರಂಭ ಮಾಡಿದ್ದಾರೆ. ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಈಗಾಗಲೇ ಚಿತ್ರ ಕೂಡ ನಿರ್ಮಾಣವಾಗುತ್ತಿದೆ. 'ಆಪರೇಷನ್ ಅಲಮೇಲಮ್ಮ' ಸಿನಿಮಾ ಖ್ಯಾತಿಯ ರಿಷಿ ಅಭಿನಯಿಸುತ್ತಿರುವ 'ಕವಲುದಾರಿ' ಚಿತ್ರವನ್ನ ಹೇಮಂತ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಇದರ ಬೆನ್ನಲ್ಲೇ ಈಗ ಪವರ್ ಸ್ಟಾರ್ ಸ್ಯಾಂಡಲ್ ವುಡ್ ನ ಕಂಚಿನ ಕಂಠದ ನಾಯಕ ವಸಿಷ್ಠ ಸಿಂಹ ಅವರಿಗೆ ತಮ್ಮ ನಿರ್ಮಾಣದ ಸಂಸ್ಥೆಯಲ್ಲಿ ಅಭಿನಯಿಸುವುದಕ್ಕೆ ಅವಕಾಶ ನೀಡಿದ್ದಾರೆ. 'ಕವಲುದಾರಿ' ಸಿನಿಮಾದ ಮಹೂರ್ತ ಸಂದರ್ಭದಲ್ಲೇ ತಿಳಿಸಿದಂತೆ 'ಪಿ ಆರ್ ಕೆ' ಬ್ಯಾನರ್ ನಲ್ಲಿ ಹೊಸ ಚಿತ್ರವೊಂದು ಸೆಟ್ಟೇರುತ್ತಿದೆ ಎಂದಿದ್ದರು. ಅದರಂತೆ ಸಿನಿಮಾ ಸೆಟ್ಟೇರೋದಕ್ಕೆ ತಯಾರಾಗಿದೆ. ಚಿತ್ರವನ್ನ ನವ ನಿರ್ದೇಶಕ ರಾಧಕೃಷ್ಣ ನಿರ್ದೇಶನ ಮಾಡುತ್ತಿದ್ದಾರೆ. ಅದೇ ಚಿತ್ರದಲ್ಲಿ ವಸಿಷ್ಠ ಮುಖ್ಯ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.


PKR banners is all set make their new movie and Vasista is going to be the lead

Category

🗞
News

Recommended