Skip to playerSkip to main content
  • 8 years ago
Official deadline to have display boards in Kannada by all establishments in Bengaluru is set to end by November 30.

ಕನ್ನಡ ಬೋರ್ಡ್ ಇಲ್ಲದ ಬೆಂಗಳೂರಿನ ಅಂಗಡಿಗಳಿಗೆ ಕಾದಿದೆ ಗಂಡಾಂತರ. ಅಂಗಡಿ ಮುಂಗಟ್ಟುಗಳ ನಾಮ ಫಲಕಗಳಲ್ಲಿ ಕನ್ನಡ ಬಳಸಲು ಬಿಬಿಎಂಪಿ ನವೆಂಬರ್ 30ರ ಗಡುವು ನೀಡಿದೆ. ಈಗಾಗಲೇ ಬೋರ್ಡ್ ಗಳನ್ನು ಅಳವಡಿಸಿಕೊಳ್ಳುವಂತೆ ಅಂಗಡಿಗಳ ಮಾಲಿಕರಿಗೆ ವಿನಂತಿ ಮಾಡಿಕೊಳ್ಳುತ್ತಿದ್ದು, ತಪ್ಪಿದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. "ಬಿಬಿಎಂಪಿಯ ಎಲ್ಲಾ ವಲಯಗಳ ಜಂಟಿ ಆಯುಕ್ತರಿಗೆ ತಮ್ಮ ತಮ್ಮ ವಲಯಗಳಲ್ಲಿರುವ ಎಲ್ಲಾ ಸಂಸ್ಥೆಗಳ ಫಲಕಗಳಲ್ಲಿ ಕನ್ನಡ ಬಳಸುವಂತೆ ಮಾಡಲು ಸೂಚನೆ ನೀಡಲಾಗಿದೆ," ಎಂದು ಮೇಯರ್ ಸಂಪತ್ ರಾಜ್ ಹೇಳಿದ್ದಾರೆ."ಕೆಡಿಎ ನೀಡಿದ ನಿರ್ದೇಶನದ ಮೇರೆಗೆ ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿದೆ. ಡಿಸ್ಪ್ಲೇ ಬೋರ್ಡ್ ಗಳಲ್ಲಿ ಶೇಕಡಾ 60 ಜಾಗವನ್ನು ಕನ್ನಡ ಭಾಷೆಗೆ ಬಳಸಬೇಕು ಎಂಬ ನಿಯಮವಿದೆ. ಅದರ ಪ್ರಕಾರ ನಾವು ಕ್ರಮ ಕೈಗೊಂಡಿದ್ದೇವೆ," ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.ನವೆಂಬರ್ ಅಂತ್ಯದೊಳಗೆ ಎಲ್ಲಾ ಬೋರ್ಡ್ ಗಳಲ್ಲಿ ಕನ್ನಡ ಇರುವಂತೆ ನೋಡಿಕೊಳ್ಳಲಿದ್ದೇವೆ ಎಂದು ಸಂಪತ್ ರಾಜ್ ಹೇಳಿದ್ದಾರೆ.

Category

🗞
News
Be the first to comment
Add your comment

Recommended