Skip to playerSkip to main content
  • 8 years ago
2018ರ ಚುನಾವಣೆ, ಪಕ್ಷಾಂತರ ಮಾಡಲಿರುವ ಶಾಸಕರ ಪಟ್ಟಿ! ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ 6 ತಿಂಗಳು ಬಾಕಿ ಉಳಿದಿದೆ. ಈಗಾಗಲೇ ವಿವಿಧ ಪಕ್ಷಗಳಲ್ಲಿ ಪಕ್ಷಾಂತರದ ಪರ್ವ ಆರಂಭವಾಗಿದೆ. ಹಾಲಿ ಶಾಸಕರು ಸಹ ಪಕ್ಷಾಂತರ ಮಾಡಲು ಸಜ್ಜಾಗಿದ್ದಾರೆ.ಚನ್ನಪಟ್ಟಣ ಕ್ಷೇತ್ರದ ಶಾಸಕ ಸಿ.ಪಿ.ಯೋಗೇಶ್ವರ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದಾರೆ. ಕುಡಚಿ ಕ್ಷೇತ್ರದ ಪಿ.ರಾಜೀವ್ ಬಿಜೆಪಿ ಸೇರಿದ್ದಾರೆ. ಜೆಡಿಎಸ್‌ ಪಕ್ಷದ ಆರು ಶಾಸಕರು ಪಕ್ಷದಿಂದ ಅಮಾನತುಗೊಂಡಿದ್ದು, ಕಾಂಗ್ರೆಸ್ ಸೇರುವುದು ಖಚಿತವಾಗಿದೆ.ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವು ಹಾಲಿ ಶಾಸಕರು ಬೇರೆ-ಬೇರೆ ಪಕ್ಷಗಳ ಕಡೆ ವಲಸೆ ಹೋಗುವ ಸಾಧ್ಯತೆ ಇದೆ. ಪಕ್ಷೇತರ ಶಾಸಕರು ಇದಕ್ಕೆ ಹೊರತಾಗಿಲ್ಲ, ಕುಂದಾಪುರ ಕ್ಷೇತ್ರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾ ಶೆಟ್ಟಿ ಬಿಜೆಪಿ ಸೇರಲಿದ್ದಾರೆ.ಕಾಂಗ್ರೆಸ್ ಶಾಸಕರಾದ ಡಾ.ಎ.ಬಿ.ಮಾಲಕ ರೆಡ್ಡಿ, ಮಾಲೀಕಯ್ಯ ಗುತ್ತೇದಾರ್ ಪಕ್ಷ ತೊರೆಯುವುದು ಖಚಿತವಾಗಿದೆ. ಅಂಬರೀಶ್ ಜೆಡಿಎಸ್ ಸೇರಲಿದ್ದಾರೆ ಎಂಬ ಸುದ್ದಿ ಮಂಡ್ಯದಿಂದ ಬೆಂಗಳೂರಿಗೆ ತಲುಪಿದೆ. ಯಾವ ಶಾಸಕರು ಪಕ್ಷಾಂತರ ಮಾಡಲಿದ್ದಾರೆ?

Ahead of the assembly elections sitting MLAs of various parties set to change the political party. Here are the list of MLAs of Karnataka.

Category

🗞
News
Be the first to comment
Add your comment

Recommended