Skip to playerSkip to main content
  • 8 years ago
Today(Nov.8th) is the first anniversary of Demonetization. Most of the opposition parties decided to celebrate this day as black day. And Many people in social media are posting cartoons related to Demonetization, in which they have blamed PM Narendra Modi and his government.


ಅಪನಗದೀಕರಣಕ್ಕೆ ಒಂದು ವರ್ಷ: ಮೋದಿ ಮೇಲೆ ವ್ಯಂಗ್ಯೋಕ್ತಿಯ ಪ್ರಹಾರ. ಜೇಬಿಗೊಂದು ರಾಜಗಾಂಭೀರ್ಯ ನೀಡಿದ್ದ ಐನೂರು, ಸಾವಿರದ ನೋಟುಗಳು ಮೌಲ್ಯವೇ ಇಲ್ಲದ, ಪೇಪರ್ ಪೀಸುಗಳು ಎನ್ನಿಸಿದ ದಿನ ಇದು! ಅಪನಗದೀಕರಣ ಎಂಬ ಅನಿರೀಕ್ಷಿತ ಆಘಾತಕ್ಕೆ ಇದೀಗ ಮೊದಲ ವಾರ್ಷಿಕೋತ್ಸವ(ನ.08). ಕಪ್ಪುಹಣ ನಿಗ್ರಹ, ಭ್ರಷ್ಟಾಚಾರ ತಡೆ, ಭಯೋತ್ಪಾದನೆ ನಿರ್ಮೂಲನೆ ಮುಂತಾದ ಹಲವು ಪ್ರಮುಖ ಉದ್ದೇಶಗಳನ್ನಿಟ್ಟುಕೊಂಡು ಕೇಂದ್ರ ಎನ್ ಡಿಎ ಸರ್ಕಾರ ಘೋಷಿಸಿದ ಅಪನಗದೀಕರಣದ ಪರಿಣಾಮವನ್ನು ನಿಕಷಕ್ಕೆ ಹಚ್ಚಿ ನೋಡುವ ಸಂದರ್ಭ ಇದು. ಆದರೆ ಬ್ಯಾಂಕುಗಳ ಮುಂದೆ ಹನುಮಂತನ ಬಾಲದ ಹಾಗೆ ಸೃಷ್ಟಿಯಾಗಿದ್ದ ಕ್ಯೂಗಳು, ಹಣವಿಲ್ಲದೆ ಸದಾ 'ಮುಚ್ಚಿದ ಬಾಗಿಲು' ಆಗಿರುತ್ತಿದ್ದ ಎಟಿಎಂಗಳು, ನಂತರ ಎರಡು ಸಾವಿರದ ನೋಟು ಬಿಡುಗಡೆಯಾದರೂ, ಚಿಲ್ಲರೆಗಾಗಿ ಯಾರ್ಯಾರದೋ ಮುಂದೆ ಕೈಬಿಚ್ಚಿನಿಂತ ಕ್ಷಣ... ಎಲ್ಲವೂ ಅಪನಗದೀಕರಣದ ಕುರಿತು ಶ್ರೀಸಾಮಾನ್ಯನಲ್ಲಿ ರೇಜಿಗೆ ಹುಟ್ಟಿಸಿದ್ದರೆ ಅಚ್ಚರಿಯೇನಿಲ್ಲ.

Category

🗞
News
Be the first to comment
Add your comment

Recommended