ಹಂಪಿಗೆ ಮೂರು ಬಾರಿ ಭೇಟಿ ನೀಡಿದರೂ, ವಿರೂಪಾಕ್ಷನ ದರ್ಶನ ಮಾಡದ ಸಿಎಂ. ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುವ ಭಯದಿಂದ ಯಡಿಯೂರಪ್ಪ ಆದಿಯಾಗಿ ಹೆಚ್ಚಿನ ಮುಖ್ಯಮಂತ್ರಿಗಳು ಅಲ್ಲಿಗೆ ಭೇಟಿ ನೀಡಿರಲಿಲ್ಲ. ಆ ಪದ್ದತಿಗೆ ಬ್ರೇಕ್ ಹಾಕಿದ್ದು ಹಾಲೀ ಸಿಎಂ ಸಿದ್ದರಾಮಯ್ಯ. ಆದರೆ, ಹಂಪಿಗೆ ಭೇಟಿ ನೀಡುವ ಸಿಎಂ ವಿರೂಪಾಕ್ಷನ ದರ್ಶನ ಯಾಕೆ ಮಾಡುತ್ತಿಲ್ಲ? ವಿಜಯನಗರದ ಭವ್ಯ ಪರಂಪರೆಯನ್ನು ಸ್ಮರಿಸಿಕೊಳ್ಳುವ 'ಹಂಪಿ ಉತ್ಸವ'ಕ್ಕೆ ಮುಖ್ಯಮಂತ್ರಿಗಳು ಹಂಪಿಯಲ್ಲಿ ಶುಕ್ರವಾರ (ನ 3) ಸಂಜೆ ಚಾಲನೆ ನೀಡಿದ್ದಾರೆ. ಸಿಎಂ ಆದ ನಂತರ ಹಂಪಿ ಉತ್ಸವವನ್ನು ಸಿದ್ದರಾಮಯ್ಯ ಉದ್ಘಾಟಿಸುತ್ತಿರುವುದು ಇದು ಮೂರನೇ ಬಾರಿ.ಕಷ್ಟ ಬಂದಾಗ ದೇವರನ್ನು ಸ್ಮರಿಸಿಕೊಳ್ಲುವುದು, ದೇವಾಲಯಕ್ಕೆ ಹೋಗುವುದು ಪದ್ದತಿ, ಆದರೆ ದೇವರ ದರ್ಶನ ಮಾಡಿದರೆ ಕಷ್ಟ ಎದುರಾಗುತ್ತದೆ ಎನ್ನುವುದನ್ನು ಅದ್ಯಾರು ಹುಟ್ಟುಹಾಕಿದರೋ? ಒಟ್ಟಿನಲ್ಲಿ ಪರದೆಯ ಮುಂದೆ ಎಷ್ಟೇ ಮೌಢ್ಯ, ಮೂಢನಂಬಿಕೆ ಅಂದರೂ ಪರದೆಯ ಹಿಂದೆ ಅದನ್ನು ನಂಬುವವರೂ ಅಷ್ಟೇ ಜನರಿದ್ದಾರೆ. ಅದಕ್ಕೆ ರಾಜಕಾರಣಿಗಳೂ ಹೊರತಾಗಿಲ್ಲ.
Be the first to comment