Skip to playerSkip to main content
  • 8 years ago
ವಿನೂತನ ಪ್ರತಿಭಟನೆಯಿಂದ ಸುದ್ದಿ ಮಾಡುವ ಶಿಗ್ಲಿ ಬಸ್ಯಾ ಹಾವೇರಿಯಲ್ಲಿ ಮೊಬೈಲ್ ಟವರ್ ಏರಿ ಕುಳಿತಿದ್ದಾನೆ. ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಕುಳಿತು ಬುಧವಾರ ಬೆಳಗ್ಗೆ ಹೈಡ್ರಾಮ ಮಾಡುತ್ತಿದ್ದಾನೆ. ಹಾವೇರಿ ಜಿಲ್ಲಾ ನ್ಯಾಯಾಲಯದಲ್ಲಿರುವ 307 ಕೇಸ್ ವಿಚಾರಣೆಯನ್ನು ಮಾಧ್ಯಮದವರ ಮುಂದೆಯೇ ನಡೆಸಬೇಕು ಎಂದು ಶಿಗ್ಲಿ ಬಸ್ಯಾ ಬೇಡಿಕೆ ಇಟ್ಟಿದ್ದಾನೆ. ಬೇಡಿಕೆ ಈಡೇರದಿದ್ದರೆ ಕೆಳಗೆ ಜಿಗಿಯುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾನೆ. 2011ರಲ್ಲಿ ನ್ಯಾಯಾಲಯದ ಆವರಣದಲ್ಲಿಯೇ ವಕೀಲ ವಿರೇಶ್ ಚಾಲವಾಡಿ ಬೆರಳು ಕಚ್ಚಿ ಶಿಗ್ಲಿ ಬಸ್ಯಾ ಆವಾಂತರ ಮಾಡಿದ್ದರು. ಈ ಘಟನೆ ನಂತರ ಬಸ್ಯಾ ವಿರುದ್ಧ 307 (ಕೊಲೆ ಮಾಡಲು ಯತ್ನ) ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ನನ್ನ ಪರವಾಗಿ ನಾನೇ ವಾದ ಮಾಡುತ್ತೇನೆ ಎಂಬುದು ಬಸ್ಯಾ ಹಠ. 'ನಾನು ವಾದ ಮಾಡುತ್ತೇನೆ. ಗೆಲ್ಲುವ ವಿಶ್ವಾನ ನನಗಿದೆ. ಮಾಧ್ಯಮದವರಿಗೆ ನನ್ನ ವಾದ ನೋಡಲು ಅವಕಾಶ ನೀಡಬೇಕು. ಅವರನ್ನು ಕೋರ್ಟ್ ಹಾಲ್‌ವೊಳಗೆ ಬಿಡಬೇಕು' ಎಂಬ ಬೇಡಿಕೆ ಮುಂದಿಟ್ಟುಕೊಂಡು ಬಸ್ಯಾ ಟವರ್ ಏರಿ ಕೂತಿದ್ದಾನೆ...

Shigli Basya known for defending himself against charges of theft, staged a protest this time by climbing a mobile tower in Haveri on October 25, 2017 morning and demanding for allow media to enter court hall.

Category

🗞
News
Be the first to comment
Add your comment

Recommended