ಅಗ್ರಿಕಲ್ಚರ್ ಇಸ್ ದಿ ಫಸ್ಟ್ ಕಲ್ಚರ್, ಮನುಕುಲದ ಚರಿತ್ರೆಲಿ ಕೃಷಿ ಅನ್ನೋದೇ ಮೊದಲ ಸಂಸ್ಕೃತಿ.. ಈ ಮಾತು ಇಡೀ ಮಾನವ ನಾಗರಿಕತೆಯ ಮೂಲ ಏನು ಅಂತ ಸೂಚಿಸುತ್ತೆ.. ಮನುಷ್ಯ ಅಲೆಮಾರಿತನ ಬಿಟ್ಟು ಒಂದೆಡೆ ನೆಲೆಸೋಕೆ, ಸಮುದಾಯವಾಗಿ ಬದುಕೋಕೆ ಆರಂಭಿಸಿದ್ದೇ ಕೃಷಿಯಿಂದ.. ಬೀಜ ಬಿತ್ತಿ, ಬೆಳೆ ತೆಗೆದು, ಅದ್ರಿಂದ ಬಂದ ಆಹಾರನ ಸಂಗ್ರಹಿಸೋದನ್ನ ಕಲಿತಾಗಲೇ ಸಂಸ್ಕೃತಿ, ಆರ್ಥಿಕತೆ, ಕಾನೂನು ಮತ್ತು ಸಮಾಜ, ಹುಟ್ಟಿಕೊಂಡಿದ್ದು..ಕೃಷಿ ಕೇವಲ ಉದ್ಯೋಗ ಅಲ್ಲ; ಅದು ಜೀವನಶೈಲಿ, ಜ್ಞಾನದ ಮೂಲ.. ಅದಕ್ಕಿಂತಾ ಮುಖ್ಯವಾಗಿ, ನಮ್ಮ ಸಮಾಜದ ಅಡಿಪಾಯ.. ಆದ್ರೆ ಅದೇ ಸಂಸ್ಕೃತಿನಾ ಅನುಸರಿಸ್ತಾ ಇರೋ ರೈತನ ಸ್ಥಿತಿ ಇವತ್ತು ಏನಾಗಿದೆ? ಜಗತ್ತಲ್ಲಿ ಏನಾಗ್ತಾ ಇದೆ?
Be the first to comment