ನವರಾತ್ರಿ ಎಂಬುದು ದೇವಿ ದುರ್ಗೆಯ ಆರಾಧನೆಯ ಮಹತ್ವದ ಹಬ್ಬವಾಗಿದೆ. ಈ ಹಬ್ಬವನ್ನು ಒಂಬತ್ತು ದಿನಗಳು ಆಚರಿಸಲಾಗುತ್ತದೆ ಮತ್ತು ಪ್ರತಿಯೊಂದು ದಿನವೂ ದೇವಿಯ ವಿಭಿನ್ನ ರೂಪಗಳನ್ನು ಪೂಜಿಸಲಾಗುತ್ತದೆ. ನವರಾತ್ರಿ ದುರ್ಗೆಯ ಶಕ್ತಿ, ಭಕ್ತಿ ಮತ್ತು ಧೈರ್ಯದ ಸಂಕೇತವಾಗಿದೆ. ನವರಾತ್ರಿ ದುರ್ಗಾದೇವಿ ದುಷ್ಟ ಶಕ್ತಿಯ ಜಯ ಸಾಧಿಸಿದ ದಿನಗಳಾಗಿ ಆಚರಿಸಲಾಗುತ್ತದೆ. ನವರಾತ್ರಿಯಲ್ಲಿ ಹೆಚ್ಚು ಅಂಧಕಾರ ಇರುವ ಕಾರಣ ರಾಕ್ಷಸರು ದೇವೆತೆಗಳ ಆಕ್ರಮಣ ಮಾಡಲು ಈ ದಿನಗಳನ್ನು ಆಯ್ಕೆ ಮಾಡಿಕೊಂಡಿದ್ದರು. ದುರ್ಗಾ ದೇವಿ ಚಂಡ ಮುಂಡ, ಶುಂಭ ನಿಶುಂಭ ಸೇರಿದಂತೆ ಹಲವು ರಾಕ್ಷಸರನ್ನು ಸಂಹಾರ ಮಾಡಿದ್ದಳು.
Be the first to comment