ಸರಿಗಮಪ ರಿಯಾಲಿಟಿ ಶೋ ಮೂಲಕ ಖ್ಯಾತಿ ಗಳಿಸಿದ ಸುಹಾನಾ ಸಯ್ಯದ್ ಇದೀಗ ತಮ್ಮ ಪ್ರೀತಿಯ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಹಿಂದೊಮ್ಮೆ ಭಜನೆ ಹಾಡಿದ್ದಕ್ಕೆ ವಿವಾದಕ್ಕೀಡಾದ ಅವರು, ಈಗ ನಿರ್ಭೀತಿಯಾಗಿ ನಿತಿನ್ ಶಿವಾಂಶ್ ಜೊತೆಗಿನ ಸಂಬಂಧವನ್ನು ಹಂಚಿಕೊಂಡಿದ್ದಾರೆ. ಶಾಲಾ ದಿನಗಳಲ್ಲೇ ಪರಿಚಯವಾದ ಈ ಜೋಡಿ, 16 ವರ್ಷಗಳ ಸ್ನೇಹವನ್ನು ಪ್ರೀತಿಯಾಗಿ ಬೆಳೆಸಿಕೊಂಡಿದ್ದಾರೆ. ನಿತಿನ್ ರಂಗಭೂಮಿ ಮತ್ತು ಸಿನಿಮಾದಲ್ಲಿ ಸಕ್ರಿಯರಾಗಿದ್ದು, ಸುಹಾನಾಳಿಗೆ ಸದಾ ಬೆಂಬಲವಾಗಿದ್ದಾರೆ. ತಮ್ಮ ಪ್ರೀತಿಯಲ್ಲಿ ಎದುರಿಸಿದ ಸವಾಲುಗಳ ನಡುವೆಯೂ ಅವರು ದೃಢವಾಗಿ ನಿಂತಿದ್ದಾರೆ. “ನಮ್ಮ ಪ್ರೀತಿಗೆ ನಿಮ್ಮ ಆಶೀರ್ವಾದವಿರಲಿ” ಎಂದು ಜೋಡಿ ಸಾಮಾಜಿಕ ಜಾಲತಾಣದಲ್ಲಿ ಘೋಷಿಸಿದ್ದಾರೆ.
Be the first to comment