Skip to playerSkip to main content
  • 3 years ago
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಮಾಜಿ ಸಂಸದೆ ರಮ್ಯಾ ನಡುವಿನ ಟ್ವೀಟ್ ವಾರ್, ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದೆ. ಕಾಂಗ್ರೆಸ್‌ನ ಕೆಲವು ನಾಯಕರು ರಮ್ಯಾ ನಡೆ ಟೀಕಿಸಿದ್ದರೆ, ಮತ್ತೆ ಕೆಲವರು ಬೆಂಬಲಿಸಿದ್ದಾರೆ. ಈ ಮಧ್ಯೆ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನರಾಯಣ್ ಅವರು ರಮ್ಯಾ ಅವರ ನಡೆಯನ್ನು ಖಂಡಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಧ್ರುವನಾರಾಯಣ್, ಕೆಪಿಸಿಸಿ ಅಧ್ಯಕ್ಷರ ವಿರುದ್ಧ ಬಹಿರಂಗವಾಗಿ ಟ್ವೀಟ್ ಮಾಡಿದ ರಮ್ಯಾ ಅವರ ನಡೆ ಒಪ್ಪತಕ್ಕದ್ದಲ್ಲ ಎಂದು ಅಸಮಾಧಾನ ಹೊರಹಾಕಿದರು. ಏನೇ ಸಮಸ್ಯೆಗಳಿದ್ದರೂ ಅದನ್ನು ಪಕ್ಷದ ಆಂತರಿಕ ವೇದಿಕೆಯಲ್ಲಿ ಇತ್ಯರ್ಥಪಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಅಧ್ಯಕ್ಷರ ವಿರುದ್ಧವೇ ಟ್ವೀಟ್ ಮಾಡುವುದು ಸರಿಯಲ್ಲ ಎಂದು ಧ್ರುವನಾರಾಯನ್ ಹರಿಹಾಯ್ದರು.

ಸಂಸದರಾಗಿದ್ದವರು ಈ ರೀತಿ ಬಹಿರಂಗವಾಗಿ ಟ್ವಿಟ್ ಮಾಡಬಾರದಿತ್ತು.ಏನೇ ಸಮಸ್ಯೆಗಳಿದ್ದರೂ ಪಕ್ಷದ ವರಿಷ್ಠರು, ರಾಜ್ಯ ಉಸ್ತುವಾರಿಗಳ ಗಮನಕ್ಕೆ ತರಬಹುದಿತ್ತು. ಆದರೆ ಪಕ್ಷದ ಚೌಕಟ್ಟನ್ನು ಮೀರಬಾರದಿತ್ತು ಎಂದು ಧ್ರುವನರಾಯಣ್ ಅಭಿಪ್ರಾಯಪಟ್ಟರು.

Category

🐳
Animals
Be the first to comment
Add your comment

Recommended