ಎನ್ಎಂಡಬ್ಲ್ಯು(NMW) ರೇಸಿಂಗ್ ಕಂಪನಿಯು ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಬೈಕ್ ಮಾದರಿಗಾಗಿ ವಿಶೇಷವಾದ ರೇಸಿಂಗ್ ಕಿಟ್ ಸಿದ್ದಪಡಿಸಿದ್ದು, ಮಾಡಿಫೈಗೊಳಿಸಲಾದ ಈ ಹಿಮಾಲಯನ್ ಮಾದರಿಯಲ್ಲಿ ಹಲವಾರು ಆಸಕ್ತಿದಾಯಕವಾದ ತಾಂತ್ರಿಕ ಅಂಶಗಳನ್ನು ಡ್ರೈವ್‌ಸ್ಪಾರ್ಕ್ ತಂಡವು ನಿಮಗೆ ವಿವಿಧ ಹಂತದ ಸಂಚಿಕೆಗಳನ್ನು ಪ್ರಕಟಿಸುತ್ತಿದೆ. ಕಳೆದ ಸಂಚಿಕೆಯಲ್ಲಿ ಮಾಡಿಫೈ ಕಿಟ್ ಹೊಂದಿರುವ ಎಂಜಿನ್ ಅನ್ನು ಮೋಟಾರ್‌ಸೈಕಲ್‌ಗೆ ಅಳವಡಿಕೆ ಕುರಿತಂತೆ ಮಾಹಿತಿ ನೀಡಲಾಗಿತ್ತು.
ರೇಸಿಂಗ್ ಕಿಟ್ ಜೋಡಣೆ ಹೊಂದಿರುವ ಮಾಡಿಫೈ ಹಿಮಾಲಯನ್ ಬೈಕ್ ಮಾದರಿಯು ಇದೀಗ ರೈಡ್‌ಗೆ ಸಿದ್ದವಾಗುತ್ತಿದೆ. ಮಾಡಿಫೈ ಬೈಕಿನಲ್ಲಿ ಇದೀಗ ರೇಸಿಂಗ್ ಇಸಿಯು ಅಳವಡಿಕೆ ನಡೆಯುತ್ತಿದ್ದು, ಮುಂದಿನ ಹಂತದಲ್ಲಿ ಬೈಕ್ ಸವಾರಿಗೆ ಸಿದ್ದವಾಗುತ್ತಿದೆ. ಹಾಗಾದ್ರೆ ರೇಸಿಂಗ್ ಕಿಟ್ ಜೋಡಣೆಯ ನಂತರ ಬೈಕ್ ಸವಾರಿ ಮಾಡುವ ಮುನ್ನ ಮಾಡಿಕೊಳ್ಳಬೇಕಾದ ಕೆಲವು ಸಿದ್ಧತೆಗಳು ಮತ್ತು ಕಾರ್ಯವಿಧಾನಗಳ ಬಗೆಗೆ ತಿಳಿಯಲು ಸಂಚಿಕೆಯನ್ನು ವೀಕ್ಷಿಸಿ.
Be the first to comment