ಜನಗಳ ನಡುವೆ ಇದ್ದೂ ಕವಿ ಭಿನ್ನನಾಗುವ ಪರಿ . ಕವಿ ಸಮಾಜಜೀವಿ. ಜನರ ನಡುವೆಯೇ ಇರುತ್ತಾನೆ. ಆದರೆ ಜನಸಾಮಾನ್ಯನ ಚಿಂತನಕ್ರಮ ಒಂದು ರೀತಿ ಇದ್ದರೆ ಕವಿಯ ಚಿಂತನಕ್ರಮವೇ ಬೇರೆಯಾಗಿರುತ್ತದೆ. ಜನರ ನಡುವೆಯೇ ಇದ್ದು ಜನರಿಗಿಂತ ಕವಿ ಭಿನ್ನನಾಗಿ ನಿಲ್ಲುವುದು ಅವನ ವಿಭಿನ್ನ ಚಿಂತನಕ್ರಮ, ಮಾತು, ಇರುವಿಕೆಗಳ ಬಗೆಯಿಂದ. ಕವಿಯ ಸ್ವಾಭಿಮಾನ, ಸ್ವಂತಿಕೆ, ಆತ್ಮನಿರ್ಭರತೆ ವಿಶಿಷ್ಠವಾದವುಗಳು. ಜನರು ನಿಲುಗಡೆಯಾಗುವ ಸ್ಥಳದಿಂದ ಕವಿ ಮುಂದಡಿ ಇಡುವನು. ಲೋಕದೊಳಗಿದ್ದೂ ಲೋಕಕ್ಕಿಂತ ಭಿನ್ನನಾಗಿ ನಿಲ್ಲುವುದು ಕವಿಯ ಜಾಯಮಾನ. ಕವಿಯ ಮನೋಭೂಮಿಕೆ ಎಂತಹದು ಎಂಬುದನ್ನು ಈ 'ನಾನು ಕವಿ' ಎಂಬ ಕವನದಲ್ಲಿ ಕಾಣಬಹುದು.
Follow : ▶️ Like us on Facebook : https://www.facebook.com/mbrloka/?modal=admin_todo_tour Follow : ▶️ dailymotion : https://www.dailymotion.com/mbrloka
Be the first to comment