ಎರಡನೇ ತಲೆಮಾರಿನ ಮಾರುತಿ ಸುಜುಕಿ ಸೆಲೆರಿಯೊ ಕಾರು ಅಭಿವೃದ್ಧಿ ಹಂತದಲ್ಲಿದೆ. ಮಾರುಕಟ್ಟೆಯಲ್ಲಿರುವ ಪ್ರಸ್ತುತ ತಲೆಮಾರಿನ ಕಾರು ನಿರೀಕ್ಷಿತ ಪ್ರಮಾಣದಲ್ಲಿ ಮಾರಾಟವಾಗದ ಕಾರಣಕ್ಕೆ ಹೊಸ ತಲೆಮಾರಿನ ಸೆಲೆರಿಯೋ ಕಾರಿನಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗುವುದು ಎಂದು ವರದಿಗಳಾಗಿವೆ.
ವೈಎನ್‌ಸಿ ಎಂಬ ಕೋಡ್ ನೇಮ್ ಹೊಂದಿರುವ ಎರಡನೇ ತಲೆಮಾರಿನ ಮಾರುತಿ ಸುಜುಕಿ ಸೆಲೆರಿಯೊ ಕಾರು ಮಾರುತಿ ಎರ್ಟಿಗಾ, ಎಕ್ಸ್‌ಎಲ್ 6 ಹಾಗೂ ವ್ಯಾಗನ್ ಆರ್ ಕಾರುಗಳ ರೀತಿಯಲ್ಲಿ ಐದನೇ ತಲೆಮಾರಿನ ಹರ್ಟ್‌ಟೆಕ್ಟ್ ಪ್ಲಾಟ್‌ಫಾರ್ಮ್ ಹೊಂದಿರಲಿದೆ.
ಈ ಹ್ಯಾಚ್‌ಬ್ಯಾಕ್ ಕಾರು 1.0-ಲೀಟರಿನ ಕೆ 10ಬಿ ಮೂರು ಸಿಲಿಂಡರ್‌ನ ಬಿಎಸ್ 6 ಎಂಜಿನ್ ಹೊಂದಿರಲಿದೆ. ಈ ಎಂಜಿನ್ 67 ಬಿಹೆಚ್‌ಪಿ ಪವರ್ ಹಾಗೂ 90 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.
Be the first to comment