'ಕೆ ಜಿ ಎಫ್ 2' ಸಿನಿಮಾದ 'ಅಧೀರ'ನ ಪಾತ್ರದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಕಾಣಿಸಿಕೊಳ್ಳುತ್ತಿದ್ದಾರೆ. ಜುಲೈ 29 ಸಂಜಯ್ ದತ್ ಹುಟ್ಟುಹಬ್ಬದ ವಿಶೇಷವಾಗಿ ಅಧೀರ ಪಾತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಫಸ್ಟ್ ಲುಕ್ ನಲ್ಲಿ ಸಂಜಯ್ ದತ್ ಮುಖದ ಮೇಲಿನ ಟ್ಯಾಟೂ ಆಕರ್ಷಕವಾಗಿದೆ. ಆದರೆ, ಈ ಟ್ಯಾಟೂದಲ್ಲಿ ಬರೆದಿರುವುದು ಏನು..?, ಆ ಪದದ ಅರ್ಥ ಏನಿರಬಹುದು ಎನ್ನುವ ಪ್ರಶ್ನೆ ಮೂಡುತ್ತಿದೆ.
Be the first to comment