One of the most expected celebrity marriages of 2017 has taken place on December 11th, in Tuscan village in Italy. Yes, Bollywood beauty Anushka Sharma and Cricket hero Virat Kohli got married. The Most luxurious marriage takes place with family members' and close relatives', friends' presence. Here is a Honeymoon Photo of Virushka which is going Viral.
ಹಲವು ದಿನಗಳ, ವರ್ಷಗಳ 'ಅಂತೆ-ಕಂತೆ' ಕಥೆಗಳಿಗೆ ಕೊನೆಗೂ ಪೂರ್ಣವಿರಾಮ ಬಿದ್ದಿದೆ. ಬಾಲಿವುಡ್ ನ ಕೋಲ್ಮಿಂಚು ಅನುಷ್ಕಾ ಶರ್ಮಾ ಮತ್ತು ಕ್ರಿಕೆಟ್ ದಿಗ್ಗಜ ವಿರಾಟ್ ಕೋಹ್ಲಿ ಸಪ್ತಪದಿ ತುಳಿದಿದ್ದಾರೆ. ಇಟಲಿಯ ಟಸ್ಕನಿ ಎಂಬಲ್ಲಿ ಇವರ ವಿವಾಹ ಮಹೋತ್ಸವ ನಡೆದಿದೆ. ಅದೂ ಕುಟುಂಬಸ್ಥರು, ತೀರಾ ಆಪ್ತ ಬಂಧುಗಳು, ಸ್ನೇಹಿತರ ಉಪಸ್ಥಿತಿಯಲ್ಲಿ.ಇಷ್ಟು ದಿನ ಕೆಲವು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಈ ಕ್ಯೂಟ್ ಜೋಡಿಯನ್ನು ಕಂಡವರು, ಇಬ್ಬರೂ ಮದುವೆಯಾದರೆ ಎಷ್ಟು ಚೆನ್ನ ಎಂದುಕೊಂಡಿದ್ದಿದೆ. ನಿರಂತರ ಶೂಟಿಂಗ್ ನಡುವೆಯೂ ಬಿಡುವು ಮಾಡಿಕೊಂಡು ವಿರಾಟ್ ಕೋಹ್ಲಿ ಅವರ ಆಟವನ್ನು ನೋಡಲು ಹೋಗುತ್ತಿದ್ದ ಅನುಷ್ಕಾ, ಅನುಷ್ಕಾ ಚಿತ್ರಗಳನ್ನು ನೋಡಿ ಮನಸಾರೆ ಮೆಚ್ಚಿಕೊಂಡು ಅಭಿನಂದಿಸುತ್ತಿದ್ದ ಕೋಹ್ಲಿ.... ಒಟ್ಟಿನಲ್ಲಿ ಅನುರೂಪ ಅನ್ನಿಸುವಂಥ ಈ ಜೋಡಿಯನ್ನು ಕಂಡು ಮತ್ಸರ ಪಟ್ಟವರಿಗಿಂತ ಖುಷಿ ಪಟ್ಟವರೇ ಹೆಚ್ಚು.ಇದೀಗ ವಿರಾಟ್ ಅನುಷ್ಕಾ ಹನಿಮೂನ್ ಫೋಟೋಗಳು ವೈರಲ್ ಆಗಿವೆ.