Skip to playerSkip to main contentSkip to footer
  • 12/15/2017
ಇಲ್ಲಿನ ಶ್ರೀ ಶಿವ ಛತ್ರಪತಿ ಕ್ರೀಡಾ ಸಂಕೀರ್ಣ ಮೈದಾನದಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಪಂದ್ಯದಲ್ಲಿ ಪುಣೆ ಎಫ್ ಸಿ ತಂಡವನ್ನು ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ಸುಲಭವಾಗಿ ಸೋಲಿಸಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಬಿಎಫ್ ಸಿಯ ಮುಂಪಡೆ ಆಟಗಾರ ಮಿಕು ಆಟಕ್ಕೆ ಪುಣೆಯ ಪ್ರೇಕ್ಷಕರು ಮನ ಸೋತರು. ಎಫ್‌ಸಿ ಪುಣೆ ಸಿಟಿ ತಂಡದ ವಿರುದ್ಧ ಬಿಎಫ್‌ಸಿ 3-1 ಗೋಲುಗಳಿಂದ ಜಯ ದಾಖಲಿಸಿದೆ. 35ನೇ ನಿಮಿಷದಲ್ಲಿ ಇಸಾಕ್ ವನ್‌ಮೌಸಲ್ಮಾ ಅವರ ನೆರವಿನಿಂದ ಆದಿಲ್ ಖಾನ್‌ ಗೋಲು ಗಳಿಸಿ ಪುಣೆಗೆ ಮುನ್ನಡೆ ತಂದುಕೊಟ್ಟರು. ವೆನೆಜುವೆಲಾ ಮೂಲದ ಬಿಎಫ್ ಸಿ ಆಟಗಾರ ಮಿಕು 64 ಹಾಗೂ 78ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಸುನಿಲ್ ಚೆಟ್ರಿ ಅಂತಿಮ ಕ್ಷಣದಲ್ಲಿ ಗೋಲು ಗಳಿಸಿದರು.

Bengaluru FC beats pune city in style after miku scores 2 goals . And Chhetri finished the match with a goal during extra time

Category

🥇
Sports

Recommended