ಪರೇಶ್ ಮೇಸ್ತಾ ಕೇಸ್ : ತಂದೆ ಪರೇಶ್ ಬಗ್ಗೆ ಹೇಳೋದ್ ಹೀಗೆ | Oneindia Kannada

  • 6 years ago
Prohibitory order has been imposed for 3 days in Uttara Kannada
district following murder of Hindu activist Paresh Mesta and communal
clash happening in many cities including Kumta, Karwar, Sirsi, Mundagod
etc. Paresh's mutilated body was found on December 8. Now Paresh Mesta
father reacts & speaks about the whole incident. Watch Video.

ಚಿತ್ರಹಿಂಸೆ ನೀಡಿ, ಕಾದ ಎಣ್ಣೆ ಸುರಿದು 21 ವರ್ಷದ ಪರೇಶ್ ಮೆಸ್ತಾನನ್ನು
ಹತ್ಯೆಗೈದ ನಂತರ ಕೋಮದ್ವೇಷ ತಾರಕಕ್ಕೇರಿದ್ದು, ಕುಮಟಾದಲ್ಲಿ ತೀವ್ರ ಉದ್ವಿಗ್ನ
ಪರಿಸ್ಥಿತಿ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಯಾದ್ಯಂತ 3 ದಿನ ನಿಷೇಧಾಜ್ಞೆ ಜಾರಿ
ಮಾಡಲಾಗಿದೆ.ಡಿಸೆಂಬರ್ 12ರಿಂದ 14ರವರೆಗೆ ಮೂರು ದಿನಗಳು ಉತ್ತರ ಕನ್ನಡ ಜಿಲ್ಲಾದ್ಯಂತ
ಯಾವುದೇ ಸಭೆ, ಸಮಾರಂಭ, ಮೆರವಣಿಗಳನ್ನು ನಡೆಸುವಂತಿಲ್ಲ.ಜಿಲ್ಲೆಯಲ್ಲಿ ಕಾನೂನು
ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮದುವೆ, ಮುಂಜಿ, ಇತ್ಯಾದಿ ವೈಯಕ್ತಿಕ ಕಾರ್ಯಕ್ರಮ
ಹೊರತುಪಡಿಸಿ, ಉತ್ತರ ಕನ್ನಡ ಜಿಲ್ಲಾದ್ಯಂತ 11 ತಾಲೂಕುಗಳಲ್ಲಿ ಯಾವುದೇ ಸಭೆ, ಸಮಾರಂಭ,
ಮೆರವಣಿಗೆಗಳು, ಬೈಕ್ rallyಗಳಿಗೆ ನಿಷೇಧ ಹೇರಲಾಗಿದೆ.ಜಿಲ್ಲೆಯಲ್ಲಿ ಕಾನೂನು
ಸುವ್ಯಸ್ಥೆಗಾಗಿ ಶಾಂತಿ ಕಾಪಾಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ್ದು, ಇದರ ಬೆನ್ನಲ್ಲೇ
ಮಂಗಳವಾರ ಶಿರಸಿ ಬಂದ್ ಗೆ ಹಿಂದೂಪರ ಸಂಘಟನೆಗಳು ಕರೆ ನೀಡಿವೆ.ಇನ್ನು ಇದೀಗ ಪರೇಶ್
ಮೇಸ್ತಾ ತಂದೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಡಿಯೋ ನೋಡಿ

Recommended