Skip to playerSkip to main contentSkip to footer
  • 12/13/2017
Gold prices are on a continuous sinking trend for the last 7 days. Gold price hit a 4-month low, falling by Rs 180 in Delhi bullion market on Tuesday. Gold prices have fallen Rs 1,000 in a 7-day period


ಚಿನಿವಾರ ಪೇಟೆ ಕಳೆದ ಏಳುದಿನಗಳಿಂದ ಯಾಕೋ ಸಕತ್ ಡಲ್ ಹೊಡೆಯುತ್ತಿದೆ. ಸತತವಾಗಿ ಚಿನ್ನದ ದರ ಇಳಿಮುಖ ಕಂಡಿದ್ದು, ಕಳೆದ ವಾರದಲ್ಲಿ 1000 ರುಗೂ ಅಧಿಕ ಬೆಲೆ ಕುಸಿದಿದೆ. ಚಿನ್ನಾಭರಣ ಖರೀದಿಗೆ ಇದು ಸುಸಮಯ. ದೆಹಲಿ ಚಿನಿವಾರ ಪೇಟೆಯಲ್ಲಿ ಮಂಗಳವಾರದಂದು ಪ್ರತಿ 10 ಗ್ರಾಂ ಚಿನ್ನದ ಬೆಲೆಯಲ್ಲಿ 180 ರು. ಕಡಿಮೆಯಾಗಿತ್ತು. ಅಪನಗದೀಕರಣ ಜಾರಿ ನಂತರ ನವೆಂಬರ್ 28,2016ರಲ್ಲಿ 16 ದಿನಗಳ ಕಾಲ ವ್ಯವಹಾರ ಸ್ಥಗಿತಗೊಂಡು ಬೆಲೆ ಸುಮಾರು 1,750 ರು ನಷ್ಟು ಕುಸಿತವಾಗಿತ್ತು. ಇದಾದ ಬಳಿಕ ಈಗ ಚಿನ್ನದ ಬೆಲೆ ಸತತ ಇಳಿಮುಖವಾಗಿದೆ.ಶೇ. 99.9 ಅಪರಂಜಿ ಚಿನ್ನ ಪ್ರತಿ 10 ಗ್ರಾಂಗೆ 29,400 ರು. ಮತ್ತು ಶೇ. 99.5 ಶುದ್ಧತೆಯ ಚಿನ್ನ ಪ್ರತಿ 10 ಗ್ರಾಂಗೆ 29,250ರುಗೆ ಇಳಿದಿದೆ.ಅದೇ ರೀತಿ ಬೆಳ್ಳಿ ಬೆಲೆಯಲ್ಲಿಯೂ ಕಡಿಮೆಯಾಗಿದೆ. ಬೆಳ್ಳಿ ಬೆಲೆ ಕೆ.ಜಿ.ಗೆ. 25 ರೂ. ಕಡಿಮೆಯಾಗಿದೆ. ಬೆಳ್ಳಿ ನಾಣ್ಯಗಳ ಬೆಲೆಯಲ್ಲಿ 1 ವಾರದಲ್ಲಿ 4000 ರೂ. ಕಡಿಮೆಯಾಗಿದೆ.

Category

🗞
News

Recommended