ಜಾತಿ ಮತಗಳ ಬಗ್ಗೆ ರವಿ ಬೆಳಗೆರೆ ಬರೆದಿರುವ ಲೇಖನ | Oneindia Kannada

  • 6 years ago
ಏನೋ ಬ್ರಾಹ್ಮಣಾ.. ಪುಳಿಚಾರೂ! ಅಂದವರು ಒಂದೇ ಒಂದು ಸಲ ಮುಸ್ಲಿಮರ ಗಡ್ಡದ ಬಗ್ಗೆ, ತುಂಡರಿಸಿದ ಅಂಗದ ಬಗ್ಗೆ, ಮುಸ್ಲಿಂ ಮೌಢ್ಯದ ಬಗ್ಗೆ ಮಾತನಾಡಿದ್ದಿದ್ದರೆ ಇಷ್ಟೆಲ್ಲ ರಗಳೆಯಾಗುತ್ತಿರಲಿಲ್ಲ. ಜಾತಿ ನಾಶಬಯಸುವವರು ಎಲ್ಲ ಜಾತಿಗಳ ನಾಶವನ್ನೂ ಬಯಸಬೇಕು. ನಿಜ ಹೇಳಬೇಕೆಂದರೆ, ಮುಸ್ಲಿಮರು ಭಾರತದ ಮೇಲೆ ದಂಡೆತ್ತಿ ಬಂದು ನಾನಾ ನಗರ, ಊರು, ದೇಗುಲ, ವ್ಯಕ್ತಿಗಳ ಮೇಲೆ ಅನಾಚಾರ ಮತ್ತು ಅತ್ಯಾಚಾರ ಮಾಡಿದರು ಅಂದ ಇವತ್ತು ಅವರನ್ನು ಖಂಡಿಸಬೇಕಾಗಿಲ್ಲ. ಅದಕ್ಕೋಸ್ಕರ ಎಸ್.ಎಲ್.ಭೈರಪ್ಪ ಇಷ್ಟೆಲ್ಲ ಸಾಕ್ಷಿ ಹುಡುಕಿ ಮುಸ್ಲಿಂ ಅತಿರೇಕವನ್ನು ಓದುಗರಿಗೆ ಸಾಬೀತು ಮಾಡಬೇಕಿಲ್ಲ.ಇತಿಹಾಸದಿಂದ ಅವರು ಒಂದೇ ಒಂದು ಗರಿ ಎತ್ತಿಕೊಂಡು ಬರಬೇಕಿರಲಿಲ್ಲ. ಇವತ್ತು ಮುಸ್ಲಿಂ ಭಯೋತ್ಪಾದನೆ, ಇವತ್ತು ವಿಜ್ಞಾನದೆಡೆಗೆ ಮುಸ್ಲಿಂ ಕರ್ಮಠರ ನಿಲುವು, ಇವತ್ತು ಮುಸ್ಲಿಂ ರಾಷ್ಟ್ರಗಳು ಇತರರೆಡೆಗೆ ತಳೆದಿರುವ ರಾಜಕೀಯ ನಿಲುವುಗಳು, ಇವತ್ತು ಮುಲ್ಲಾಗಳು ಬೋಧಿಸುವ ಮಡಿವಂತ ಇಸ್ಲಾಂ-ಹೇಗಿದೆಯೆಂದು ವಿಶ್ಲೇಷಿಸಿದ್ದರೆ ಸಾಕಿತ್ತು.
True colors of Kannada literary stalwarts, intellectuals as seen in critical times for example : URA v/s SLB, 07.

Recommended