'ಸ್ಟಾರ್' ಇಲ್ಲದೆ ಸಕ್ಸಸ್ ಕಂಡ ವರ್ಷದ 'ಡೀಸೆಂಟ್' ಚಿತ್ರಗಳು | Filmibeat Kannada

  • 6 years ago
ಸ್ಟಾರ್ ನಟರ ಸಿನಿಮಾಗಳ ಮಧ್ಯೆ ಹೊಸಬರ ಹಾಗೂ ಪ್ರಯೋಗಾತ್ಮಕ ಚಿತ್ರಗಳು ಕಣ್ಮರೆಯಾಗುತ್ತೆ. ಸಿನಿಮಾ ಎಷ್ಟೇ ಚೆನ್ನಾಗಿದ್ದರೂ, ಅದಕ್ಕೆ ಸಿಗಬೇಕಾದ ಮನ್ನಣೆ ಸಿಗುವುದಿಲ್ಲ. ಆದ್ರೂ, ಜನರ ಚಪ್ಪಾಳೆ, ಶಿಳ್ಳೆ, ಗಿಟ್ಟಿಸಿಕೊಳ್ಳುವಲ್ಲಿ ಈ ಚಿತ್ರಗಳು ಯಶಸ್ಸು ಕಾಣುತ್ತೆ. ಇಂತಹ ಚಿತ್ರಗಳ ಪೈಕಿ ಕೆಲವೊಂದು ಚಿತ್ರಗಳನ್ನ ನಾವು ಪಟ್ಟಿ ಮಾಡಿದ್ದೇವೆ. ಈ ಚಿತ್ರಗಳು ಮಾಸ್ ಪ್ರೇಕ್ಷಕರನ್ನ ಹೊರತು ಪಡಿಸಿದ ಚಿತ್ರಗಳು. ಕಥೆ-ಚಿತ್ರಕಥೆ-ಅಭಿನಯದ ಮೂಲಕ ಗಮನ ಸೆಳೆದಿರುವ ವಿಭಿನ್ನ ಸಿನಿಮಾಗಳು. ಈ ಚಿತ್ರಗಳಿಗೆ ಸ್ಟಾರ್ ನಿರ್ದೇಶಕ, ಸ್ಟಾರ್ ನಟ, ಸ್ಟಾರ್ ನಟಿ ಎಂಬ ಟ್ಯಾಗ್ ಇಲ್ಲ. ಆದ್ರೆ, ಬಿಡುಗಡೆಯಾದ ನಂತರ 'ಸ್ಟಾರ್' ಪಟ್ಟ ಹುಡುಕಿಕೊಂಡು ಬಂದಿವೆ. ಈ ಚಿತ್ರಗಳಲ್ಲಿ ನಿಮಗೆ ಹೆಚ್ಚು ಇಷ್ಟವಾದ ಚಿತ್ರ ಯಾವುದು ಎಂದು ಕಾಮೆಂಟ್ ಮಾಡಿ ತಿಳಿಸಿ.


Kannada Movies 2017 yearly report includes Box Office Success and popularity meter rate. Here is the Top best movies of 2017.without star actors this movies has been a hit

Recommended