ಹಲಿಯ ವಾಯು ಮಾಲಿನ್ಯದ ಬಗ್ಗೆ ಆರಿವಿದ್ದರೂ ಪಂದ್ಯವನ್ನು ಆಯೋಜಿಸಿದ್ದರ ಬಗ್ಗೆ ಪ್ರಶ್ನಿಸಿ ಬಿಸಿಸಿಐಗೆ ರಾಷ್ಟ್ರೀಯ ಹಸಿರು ಪ್ರಾಧಿಕಾರ ತರಾಟೆಗೆ ತೆಗೆದುಕೊಂಡಿದೆ. ಈ ನಡುವೆ ಮೂರನೇ ಟೆಸ್ಟ್ ಪಂದ್ಯದ ವೇಳೆ ಶ್ರೀಲಂಕಾದ ವೇಗಿ ಲಕ್ಮಲ್ ಅವರು ಮೈದಾನದಲ್ಲೇ ವಾಂತಿ ಮಾಡಿಕೊಂಡ ಘಟನೆ ನಡೆದಿದೆ. ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯಕ್ಕೆ ವಿಪರೀತ ಹೊಗೆ, ಮಂಜು ಕವಿದ ವಾತವರಣ, ಮಾಲಿನ್ಯದ ಸಮಸ್ಯೆ ಮತ್ತೆ ಕಾಡುತ್ತಿದೆ. ಭಾರತದ ಎರಡನೇ ಇನ್ನಿಂಗ್ಸ್ ನ 6ನೇ ಓವರ್ ಜಾರಿಯಲ್ಲಿರುವಾಗ ಶ್ರೀಲಂಕಾದ ವೇಗಿ ಸುರಂಗ ಲಕ್ಮಲ್ ಅವರು ವಾಂತಿ ಮಾಡಿಕೊಂಡರು. ನಂತರ ಧನಂಜಯ ಡಿ ಸಿಲ್ವಾ ವಾಂತಿ ಕೂಡ ಮಾಡಿಕೊಂಡಿದ್ದಾರೆ. ಆಂಟಿ ಪೊಲ್ಯುಶನ್ ಮಾಸ್ಕ್ ಧರಿಸಿ ಆಡುತ್ತಿದ್ದರೂ ಸಿಂಹೀಳಿಯರು ಮಾಲಿನ್ಯಕ್ಕೆ ತತ್ತರಿಸಿದ್ದಾರೆ.
Sri Lankan pacer suranga lakmal vomits in the field and This is not the first time air pollution has stopped a game in Delhi .