Skip to playerSkip to main contentSkip to footer
  • 12/1/2017
BJP High Command should warn two of their leaders in Karnataka not to use unparliamentary words

ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಷಣ ಮಾಡಿದಲೆಲ್ಲಾ ಬಿಜೆಪಿಗೆ ಅನುಕೂಲವಾಗುತ್ತೆ ಎನ್ನುವ ಮಾತಿತ್ತು, ಆದರೆ, ಅದನ್ನೆಲ್ಲಾ ಮೀರಿ ಇತ್ತೀಚಿನ ದಿನಗಳಲ್ಲಿ ರಾಹುಲ್ ಅವರಲ್ಲಿ ರಾಜಕೀಯ ವೃತ್ತಿಪರತೆಯನ್ನು ಕಾಣಬಹುದಾಗಿದೆ. ಅದೇ ರೀತಿ ಕರ್ನಾಟಕದಲ್ಲಿನ ಕೆಲವು ಬಿಜೆಪಿ ಮುಖಂಡರೂ ಹಾಗೇ, ಈ ನಾಯಕರುಗಳು ತಾವೇನು ಮಾತನಾಡುತ್ತಿದ್ದೇವೆ, ಅದರಿಂದ ಪಕ್ಷಕ್ಕಾಗುವ ನಷ್ಟವೇನು, ಸಮಾಜಕ್ಕೆ ಯಾವ ಸಂದೇಶ ಬೀರುತ್ತೆ ಅನ್ನೋದನ್ನು ಅರಿಯದೇ, ಮನಬಂದಂತೇ ಹೇಳಿಕೆ ನೀಡುತ್ತಿದ್ದಾರೆ.ಪರಿಸ್ಥಿತಿ ಹೀಗಿರುವಾಗ, ಕಾಂಗ್ರೆಸ್ಸಿಗರು ಮತದಾರರನ್ನು ಓಲೈಸಲು ತಮ್ಮ ಸರಕಾರದ ಇದುವರೆಗಿನ ಸಾಧನೆಯನ್ನು ವಿವರಿಸಬೇಕಾಗಿಲ್ಲ. ಕೆಲವು ಬಿಜೆಪಿ ಮುಖಂಡರು ನೀಡುವ ಬೇಕಾಬಿಟ್ಟಿ, ಅಸಂಬದ್ದ ಹೇಳಿಕೆಗಳಿಂದ ವೋಟು ತನ್ ತಾನಾಗಿಯೇ ಕಾಂಗ್ರೆಸ್ಸಿಗೆ ಬರದೇ ಇರುತ್ತಾ? ಬಿಜೆಪಿ ನಾಯಕರ ಹೇಳಿಕೆಗೆ ಕೌಂಟರ್ ಅಟ್ಯಾಕ್ ಮಾಡಲು ಕಾಂಗ್ರೆಸ್ಸಿಗರು ಹುಷಾರಿನಿಂದ ಪ್ರತಿಕ್ರಿಯಿಸಬೇಕು.. ಅಷ್ಟೇ.. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಾಕ್ ಸ್ವಾತಂತ್ರ್ಯ ಇದೆ ಎಂದು ಮನಬಂದತೇ ಹೇಳಿಕೆ ನೀಡಿದರೆ ಅದು ಕೊನೆಗೆ ಬಂದು ಬೀಳುವುದು ತಮ್ಮ ಪಕ್ಷದ ಬುಡಕ್ಕೇ ಎನ್ನುವುದನ್ನು ಅಮಿತ್ ಶಾ ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ, ಪ್ರಮುಖವಾಗಿ ಇಬ್ಬರು ಬಿಜೆಪಿ ಮುಖಂಡರಿಗೆ ವರಿಷ್ಠರು ತುರ್ತಾಗಿ ಕರೆದು ಎಚ್ಚರಿಕೆ ನೀಡಿದರೆ ಸೂಕ್ತ.

BJP High Command should warn two of their leaders in Karnataka ( K S Eshwarappa and Mysuru MP Pratap Simha) not to use unparliamentary words.Congress needs to do so to win the next election! watch this video

Category

🗞
News

Recommended