Skip to playerSkip to main content
  • 8 years ago
"ಬೆಳಗೆದ್ದು ಯಾರ ಮುಖವಾ ನಾನು ನೋಡಿದೆ...ಅಂದಾನೋ ಅದೃಷ್ಟನೋ ಮುಂದೆ ಕುಂತಿದೆ'.ಈ ಹಾಡನ್ನ ಗುನುಗುತ್ತಾ ಅದೇಷ್ಟು ಜನ ಯುವಕರು ತಮ್ಮ ಪ್ರೇಯಸಿ ಬಗ್ಗೆ ಯೋಚನೆ ಮಾಡಿರುತ್ತಾರೋ ಗೊತ್ತಿಲ್ಲ. ವರ್ಷಗಳು ಕಳೆದರೂ, ಮತ್ತಷ್ಟು ಮಧುರವಾದ ಹಾಡುಗಳು ಬಂದರೂ, ಈ ಹಾಡಿನ್ನ ಕ್ರೇಜ್ ಮಾತ್ರ ಇನ್ನು ಕಮ್ಮಿಯಾಗಿಲ್ಲ.ಹೌದು, 'ಕಿರಿಕ್ ಪಾರ್ಟಿ' ಚಿತ್ರದ ಈ ಹಾಡು ಯ್ಯೂಟ್ಯೂಬ್ ನಲ್ಲಿ ಹೊಸ ಇತಿಹಾಸ ನಿರ್ಮಿಸಿದೆ. ಒಂದು ವರ್ಷದಲ್ಲಿ ಸುಮಾರು 4 (40,067,539) ಕೋಟಿಗೂ ಅಧಿಕ ಬಾರಿ ಈ ಹಾಡನ್ನ ಯ್ಯೂಟ್ಯೂಬ್ ನಲ್ಲಿ ನೋಡಿದ್ದಾರೆ. ಈ ಮೂಲಕ ಕನ್ನಡದ ಹಾಡೊಂದು 40 ಮಿಲಿಯನ್ ವೀಕ್ಷಕರನ್ನ ಹೊಂದಿರುವುದು ಇದೇ ಮೊದಲು.ಅಂದ್ಹಾಗೆ, ಈ ಹಾಡಿಗೆ ಧನಂಜಯ ರಂಜನ್ ಸಾಹಿತ್ಯ ಬರೆದಿದ್ದು, ವಿಜಯ್ ಪ್ರಕಾಶ್ ಹಾಡಿದ್ದಾರೆ. ಅಜನೀಶ್ ಲೋಕನಾಥ್ ಅವರು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ನವೆಂಬರ್ 25, 2016 ರಂದು ಯೂಟ್ಯೂಬ್ ನಲ್ಲಿ ಅಪ್‌ ಲೋಡ್ ಮಾಡಲಾಗಿತ್ತು. ಇನ್ನು 10 ದಿನ ಆದ್ರೆ, ಈ ಹಾಡಿಗೆ ಒಂದು ವರ್ಷದ ಸಂಭ್ರಮ. ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರದಲ್ಲಿ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗಡೆ ಸೇರಿದಂತೆ ಹಲವರು ಅಭಿನಯಿಸಿದ್ದರು

kirik party has created anew recored and also completed 100 days in which the song "belageddu yaara mukava naanu nodidhe, has crossed 4 million views in you Tube,as this is a great achivement in sandalwood.

Category

🗞
News
Be the first to comment
Add your comment

Recommended