ಹರಿದ್ವಾರ (ಉತ್ತರಾಖಂಡ): ತನ್ನವರಿಂದ ಬೇರ್ಪಟ್ಟು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಒಂಟಿ ಮರಿ ಆನೆಯನ್ನು ಹರಿದ್ವಾರ ಅರಣ್ಯ ಇಲಾಖೆ ರಕ್ಷಿಸಿ ಮರು ಜೀವ ನೀಡಿದೆ. ಜನವರಿ 18 ರಂದು, ಅರಣ್ಯ ಇಲಾಖೆಯ ತಂಡವೊಂದು ಗಸ್ತು ಹೊಡೆಯುತ್ತಿದ್ದಾಗ ಅರೆ ಜೀವದಲ್ಲಿದ್ದ ಆನೆಮರಿಯನ್ನು ಗಮನಿಸಿದ್ದಾರೆ. ತಕ್ಷಣ ಡಿಎಫ್‌ಒ, ಎಸ್‌ಡಿಒ ಆ ಸ್ಥಳಕ್ಕೆ ಬಂದು ಪರಿಶೀಲಿಸಿ ರಕ್ಷಣಾ ತಂಡವನ್ನು ಕರೆಸಿದರು. ಮೊದಲು ಮರಿಯಾನೆ ಮೇಲೆ ಸಂಪೂರ್ಣ ನೀರು ಹಾಕಲಾಯಿತು. ಈ ವೇಳೆ ಅದರ ಕಣ್ಣುಗಳಲ್ಲಿ ಸ್ವಲ್ಪ ಚಲನೆ ಕಂಡುಬಂದಿತು. ಬಳಿಕ ಗ್ಲೂಕೋಸ್ ಸೇರಿದಂತೆ ಅಗತ್ಯ ಔಷಧಗಳನ್ನು ನೀಡಲಾಯಿತು. ಸ್ವಲ್ಪ ಚೇತರಿಕೆ ಕಂಡು ಬಂದ ನಂತರ ರೇಂಜ್‌ನಲ್ಲಿರುವ ಆನೆ ರಕ್ಷಣಾ ಕೇಂದ್ರಕ್ಕೆ ಸಾಗಿಸಿ, ಹೆಚ್ಚಿನ ಚಿಕಿತ್ಸೆ ನೀಡಲಾಯಿತು.ವಿಡಿಯೋ ಹಂಚಿಕೊಂಡ ಅರಣ್ಯ ಇಲಾಖೆ: ಸದ್ಯ ಸಂಪೂರ್ಣವಾಗಿ ಚೇತರಿಸಿಕೊಂಡು ತನ್ನ ಹಿಂಡಿನೊಂದಿಗೆ ಸೇರಲು ಸಿದ್ಧವಾಗಿದೆ. ಇದರ ಸಲುವಾಗಿ ಅರಣ್ಯ ಇಲಾಖೆ ತಂಡವು ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಸಲು ಶ್ರಮಿಸುತ್ತಿದೆ. ಅರಣ್ಯ ಇಲಾಖೆ ತಂಡದ ಪ್ರಯತ್ನಗಳ ಬಗ್ಗೆ ವಿಡಿಯೋವನ್ನು ಸಹ ಮಾಡಲಾಗಿದೆ. ಇದನ್ನು ವ್ಯಾಪಕವಾಗಿ ಪ್ರಶಂಸಿಸಲಾಗುತ್ತಿದೆ.ಇದನ್ನೂ ಓದಿ: ತನ್ನ ನೆಚ್ಚಿನ ಎತ್ತಿನ ಕಳೇಬರದೆದುರು ಕುಳಿತು ಕೊನೆಗೊಮ್ಮೆ ಅಕ್ಕರೆ ತೋರಿಸಿದ ಶ್ವಾನ- ವಿಡಿಯೋ
Comments