ಎಫ್-ಪೇಸ್ ಫೇಸ್‌ಲಿಫ್ಟ್ ಆವೃತ್ತಿಯ ಬುಕ್ಕಿಂಗ್ ಆರಂಭಿಸಿದ ಜಾಗ್ವಾರ್ | ವಿವರಣೆ ಹಾಗೂ ಇನ್ನಿತರ ವಿವರಗಳು

  • 3 years ago
ಜಾಗ್ವಾರ್ ಕಂಪನಿಯು ದೇಶೀಯ ಮಾರುಕಟ್ಟೆಯಲ್ಲಿ ತನ್ನ ಎಫ್-ಪೇಸ್ ಫೇಸ್‌ಲಿಫ್ಟ್ ಆವೃತ್ತಿಯ ಬುಕ್ಕಿಂಗ್'ಗಳನ್ನು ಆರಂಭಿಸಿದೆ.
ಈ ಕಾರಿನ ವಿತರಣೆಯನ್ನು ಮೇ ತಿಂಗಳಿನಲ್ಲಿ ಆರಂಭಿಸುವ ನಿರೀಕ್ಷೆಗಳಿವೆ.

ಜಾಗ್ವಾರ್ ಎಫ್-ಪೇಸ್ ಕಾರ್ ಅನ್ನು ಮೊದಲ ಬಾರಿಗೆ 2015ರಲ್ಲಿ ಬಿಡುಗಡೆಗೊಳಿಸಲಾಯಿತು. ಈ ಕಾರು 2017ರ ವರ್ಲ್ಡ್ ಕಾರ್ ಹಾಗೂ ವರ್ಲ್ಡ್ ಕಾರ್ ಆಫ್ ದಿ ಇಯರ್ ಪ್ರಶಸ್ತಿಗಳನ್ನು ಗೆದ್ದಿದೆ.

2020ರ ಸೆಪ್ಟೆಂಬರ್ ತಿಂಗಳಿನಲ್ಲಿ ಎಫ್-ಪೇಸ್ ಕಾರ್ ಅನ್ನು ಆಯ್ದ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಿಡುಗಡೆಗೊಳಿಸಲಾಯಿತು.

ಎಫ್-ಪೇಸ್ ಫೇಸ್ ಲಿಫ್ಟ್ ಕಾರಿನ ವಿನ್ಯಾಸದಲ್ಲಿ ಕೆಲವು ಸೂಕ್ಷ್ಮ ಬದಲಾವಣೆಗಳನ್ನು ಮಾಡಲಾಗಿದೆ. ಇವುಗಳಲ್ಲಿ ಸ್ಲೀಕ್ ಆದ ಹೆಡ್‌ಲ್ಯಾಂಪ್‌, ದೊಡ್ಡದಾದ ಗ್ರಿಲ್, ಉದ್ದವಾದ ಬಾನೆಟ್'ಗಳು ಸೇರಿವೆ.

ಜಾಗ್ವಾರ್ ಎಫ್-ಪೇಸ್ ಫೇಸ್‌ಲಿಫ್ಟ್ ಆವೃತ್ತಿಯ ಬಗೆಗಿನ ಮತ್ತಷ್ಟು ವಿವರಗಳಿಗಾಗಿ ಈ ವೀಡಿಯೊ ನೋಡಿ.

Recommended