2020ರಲ್ಲಿ ಒಂದರ ಹಿಂದೆ ಮತ್ತೊಂದು ಭಯಾನಕ ರೋಗಗಳು ಕಾಲಿಡುತ್ತಿವೆ. ಕೊರೊನಾ ಎಂಬ ಮಹಾಮಾರಿ ಆತಂಕದ ಪರಿಸ್ಥಿತಿಯನ್ನು ಸೃಷ್ಟಿಸಿರುವಾಗಲೇ H1N1,ಕಾಲರಾ, ಹಕ್ಕಿ ಜ್ವರ ಮುಂತಾದ ರೋಗಳು ಪತ್ತೆಯಾಗಿದ್ದು ಈ ರೋಗಗಳಿಂದ ಪಾರಾಗಲು ಆರೋಗ್ಯ ಹಾಗೂ ಶುಚಿತ್ವದ ಕಡೆಗೆ ಸಾಕಷ್ಟು ಮುನ್ನಚ್ಚರಿಕೆವಹಿಸಬೇಕಾಗಿದೆ. ಇದೀಗ ಬೆಂಗಳೂರಿನಲ್ಲಿ ಕೊರೊನಾ ಜೊತೆಗೆ ಕಾಲರಾ ರೋಗದ ಭೀತಿ ಶುರುವಾಗಿದೆ. ಜನರು ಬೀದಿ ಬದಿಯ ಆಹಾರಗಳನ್ನು ಸೇವಿಸದಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ಕಾಲರಾ ಆಹರ ಹಾಗೂ ನೀರಿನಿಂದ ಹರಡುವ ರೋಗವಾಗಿದೆ. ಇಲ್ಲಿ ನಾವು ಕಾಲರಾ ರೋಗದ ಲಕ್ಷಣಗಳು ಹಾಗೂ ಇದು ಹರಡುವುದು ಹೇಗೆ, ಇದನ್ನು ತಡೆಗಟ್ಟುವುದು ಹೇಗೆ? ಎಂಬ ಮಾಹಿತಿ ನೀಡಿದ್ದೇವೆ ನೋಡಿ
Be the first to comment