ಹೊಟ್ಟೆಯಲ್ಲಿ ಗ್ಯಾಸ್ ತುಂಬುವುದು ಒಂದು ಸಾಮಾನ್ಯ ಸಮಸ್ಯೆ. ಕೆಲವರಿಗೆ ಆಲೂಗಡ್ಡೆ, ಕಾಳು ಈ ರೀತಿಯ ಆಹಾರಗಳನ್ನು ತಿಂದಾಗ ಹೊಟ್ಟೆ ಉಬ್ಬುವ ಸಮಸ್ಯೆ ಉಂಟಾದರೆ, ಇನ್ನು ಕೆಲವರಿಗೆ ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗುವುದು. ಕಾರ್ಬೋಹೈಡ್ರೇಟ್ಸ್, ನಾರಿನಂಶ, ಸಕ್ಕರೆ, ಪಿಷ್ಠ ಅತ್ಯಧಿಕವಿರುವ ಆಹಾರವನ್ನು ಹೆಚ್ಚು ತಿಂದರೆ ಹೊಟ್ಟೆಗ್ಯಾಸ್ ಉಂಟಾಗುವುದು. ಸಾಮಾನ್ಯವಾಗಿ ಈ ಗ್ಯಾಸ್ ತೇಗು, ಗ್ಯಾಸ್ ಪಾಸಾಗುವ ಮೂಲಕ ಹೋಗುವುದರಿಂದ ದಿನನಿತ್ಯದ ಚಟುವಟಿಕೆಯಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಆದರೆ ಗ್ಯಾಸ್ ಹೊಟ್ಟೆಯಿಂದ ಹೊರಹೋಗದೇ ಹೋದರೆ ಹೊಟ್ಟೆ ನೋವು ಕಾಣಿಸಿಕೊಳ್ಳುವುದು. ಗ್ಯಾಸ್ಟ್ರಿಕ್ ಹೊಟ್ಟೆನೋವು ಹಲವಾರು ಕಾರಣಗಳಿಂದ ಉಂಟಾಗುತ್ತದೆ. ತಂಪು ಪಾನೀಯಗಳ ಸೇವನೆ, ಆಹಾರವನ್ನು ಸರಿಯಾಗಿ ಜಗಿಯದೆ ಬೇಗ-ಬೇಗ ತಿನ್ನುವುದು, ಆಹಾರ ನುಂಗುವಾಗ ತುಂಬಾ ಗಾಳಿ ನುಂಗಿದರೆ, ಒತ್ತಡ ಹಾಗೂ ಕೆಲವೊಂದು ಬಗೆಯ ಆಹಾರಗಳಿಂದ ಹೊಟ್ಟೆ ಗ್ಯಾಸ್ ಸಮಸ್ಯೆ ಉಂಟಾಗುವುದು. ಹೊಟ್ಟೆ ಗ್ಯಾಸ್ ಸಮಸ್ಯೆ ಕಾಡುತ್ತಿದ್ದರೆ ನೀವು ತಿನ್ನುವ ಆಹಾರದ ಜೊತೆ ಈ ಆಹಾರಗಳನ್ನು ಬಳಸಿದರೆ ಸಾಕು, ಗ್ಯಾಸ್ ತುಂಬಿ ಹೊಟ್ಟೆನೋವು ಉಂಟಾಗುವುದನ್ನು ತಡೆಯಬಹುದು.
Be the first to comment