Skip to playerSkip to main contentSkip to footer
  • 3/2/2020
ಮಕ್ಕಳು ಉತ್ತಮ ಗುಣಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಯಶಸ್ವೀ ಆಗಬೇಕೆಂದು ಪ್ರತಿಯೊಬ್ಬ ಪಾಲಕರು ಇಚ್ಚಿಸುತ್ತಾರೆ. ಅದರಲ್ಲೂ ಒಂದೆ ಮಗು ಇರುವ ಪೋಷಕರಂತೂ ತಮ್ಮ ಜೀವಮಾನವಿಡೀ ಆ ಮಗುವಿನ ಲಾಲನೆ, ಪೋಷಣೆ ಪ್ರತಿಯೊಂದರಲ್ಲೂ ಅತಿಯಾದ ಕಾಳಜಿ ವಹಿಸಿ ಸಲುಹಿರುತ್ತಾರೆ. ಆದರೆ ಈ ಅತಿಯಾದ ಕಾಳಜಿ, ಅತಿಯಾದ ಸೇವೆ ಮಕ್ಕಳ ಮುಂದಿನ ಭವಿ‍ಷ್ಯಕ್ಕೆ ಖಂಡಿತ ಮಾತಕವಾದೀತು ಎಚ್ಚರ. ಆರತಿಗೊಂದು ಕೀರ್ತಿಗೊಂದು ಎಂಬ ಮಾತು ಹಿರಿಯರಿಂದ ದೇಣಿಗೆಯಾಗಿದ್ದ ಬಂದಿದ್ದರೂ, ಇಬ್ಬರು ಪೋಷಕರೂ ಕೆಲಸಕ್ಕೆ ಹೋಗುವ ಇಂದಿನ ದಿನಕ್ಕೆ ಆರಿತಿಗಾಗಲಿ, ಕೀರ್ತಿಗಾಗಲಿ ಒಂದೇ ಮಗು ಎಂದು ಮೊದಲೇ ದಂಪತಿಗಳು ನಿರ್ಧರಿಸಿಬಿಡುತ್ತಾರೆ. ಆದರೆ ಒಂದೇ ಮಗುವಿನ ಆರೈಕೆಯಲ್ಲಿ ಇಂದಿನ ಪೋಷಕರು ಎಡವುತ್ತಾರೆ. ಅತಿಯಾದ, ಪ್ರೀತಿ ಕಾಳಜಿ, ಸೇವೆ ಮಾಡಿ ಮಗು ಸ್ವ ಅಭಿವೃದ್ಧಿ, ಸ್ವಯೋಚನೆಯನ್ನೇ ಮಾಡದಂಥ ಪರಿಸ್ಥಿತಿಗೆ ದೂಡಿರುತ್ತಾರೆ. ಒಂದೇ ಮಗುವಿನನ ಪೋಷಣೆ ಹೇಗಿರಬೇಕು, ಮಗುವಿಗೆ ಏಕಾಂಗಿತನ ಕಾಡದಂತೆ ನೋಡಿಕೊಳ್ಳುವುದು ಹೇಗೆ, ಮಕ್ಕಳ ಸ್ವತಂತ್ರ ಕಲಿಕೆ, ಬೆಳವಣಿಗೆಗೆ ಪೋಷಕರು ಯಾವ ರೀತಿ ಪೂಕರವಾಗಿರಬೇಕು ಇಲ್ಲಿದೆ ಕೆಲವು ಮುಖ್ಯ ಸಲಹೆಗಳು.

Recommended