Skip to playerSkip to main content
  • 5 years ago
ನವರಾತ್ರಿ ಅಂದರೆ ಸಡಗರ, ಸಂಭ್ರಮದ ಹಬ್ಬ. ಒಂಭತ್ತು ದಿನ ದುರ್ಗಾ ಮಾತೆಯನ್ನು ಆರಾಧಿಸುವ ಈ ಹಬ್ಬದಲ್ಲಿ ಬಣ್ಣಗಳಿಗೂ ಅಷ್ಟೇ ಮಹತ್ವವಿದೆ. ಒಂಭತ್ತು ದಿನಕ್ಕೆ ಒಂಬತ್ತು ಬಣ್ಣದ ಬಟ್ಟೆಯನ್ನು ದುರ್ಗಾ ಮಾತೆಗೆ ಉಡಿಸಲಾಗುವುದು. ಇನ್ನು ಮಹಿಳೆಯರಿಗೂ ಈ ಹಬ್ಬ ಅಂದರೆ ಒಂಭತ್ತು ದಿನ ಒಂಭತ್ತು ಬಣ್ಣದ ಬಟ್ಟೆಗಳನ್ನು ಹಾಕುವ ಖುಷಿ. ಅಲ್ಲದೆ ನವರಾತ್ರಿಗೆ ಈ ಒಂಭತ್ತು ಬಣ್ಣದ ಬಟ್ಟೆ ಧರಿಸಿದರೆ ಒಳ್ಳೆಯದು ಎಂಬ ನಂಬಿಕೆ ಕೂಡ ಇದೆ. ಇದಕ್ಕಾಗಿ ತಿಂಗಳ ಮುಂದೆಯೇ ಸಿದ್ಧತೆ ಮಾಡಿಕೊಳ್ಳುತ್ತಾರೆ. ಏಕೆಂದರೆ ಕೊನೆ ಕ್ಷಣದಲ್ಲಿ ನಮಗೆ ಬೇಕಾದ ಬಣ್ಣದ ಬಟ್ಟೆಯ ಸ್ಟಿಚ್ಚಿಂಗ್ ಮಾಡಿ ಸಿಗುವುದಿಲ್ಲ, ಆದ್ದರಿಂದ ಬಟ್ಟೆ ಅದಕ್ಕೆ ತಕ್ಕ ಆ್ಯಕ್ಸಸರಿ ಎಲ್ಲಾ ಮೊದಲೇ ರೆಡಿ ಮಾಡಿಟ್ಟುಕೊಳ್ಳುತ್ತೀರಿ ಅಲ್ವಾ? ಅದರಲ್ಲೂ ಆಫೀಸ್‌ಗಳಲ್ಲಿ ನವರಂಗ ಆಚರಿಸುತ್ತಾರೆ. ಆಗ ಆ ಬಣ್ಣದ ಡ್ರೆಸ್‌ ಹಾಕಿ ಹೋಗುವುದೇ ಸಂಭ್ರಮ. ಈಗಂತೂ ಕೆಲವರಷ್ಟೇ ಆಫೀಸ್‌ ಹೋಗಲಾರಂಭಿಸಿದ್ದಾರೆ. ಇನ್ನು ಕೆಲವರು ವರ್ಕ್ ಫ್ರಂ ಹೋಂ ಮಾಡ್ತಾ ಇದ್ದಾರೆ. ಆಫೀಸ್‌ ಹೋಗುವವರು ಹಾಗೂ ಮನೆಯಲ್ಲಿ ಇದ್ದವರೂ ಕೂಡ ನವರಂಗ ಆಚರಿಸಲು ಸಿದ್ಧತೆ ನಡೆಸಿರುತ್ತೀರಿ ಅಲ್ವಾ? ನಾವಿಲ್ಲಿ ನವರಾತ್ರಿಗೆ ಯಾವ ದಿನ ಯಾವ ಬಣ್ಣದ ಬಟ್ಟೆ ಹಾಕಬೇಕು ಎಂದು ಹೇಳಿದ್ದೇವೆ ನೋಡಿ:

#Navratri2020 #Navratri #Navratri colourimportance
Be the first to comment
Add your comment

Recommended