ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಘೋಷಣೆ ಮಾಡಿವೆ. ಆದರೆ, ಸೀಟು ಹಂಚಿಕೆಯ ವಿಚಾರ ಮೈತ್ರಿಗೆ ದೊಡ್ಡ ಸವಾಲಾಗಿದೆ. ಸಭೆಯ ಬಳಿಕ ಮಾತನಾಡಿದ ಸಿದ್ದರಾಮಯ್ಯ ಅವರು, 'ಜೆಡಿಎಸ್‌ನವರು 12 ಕ್ಷೇತ್ರಗಳನ್ನು ಅಪೇಕ್ಷಿಸಿದ್ದಾರೆ. ಸರಿಯಾದ ದಿಕ್ಕಿನಲ್ಲಿಯೇ ಚರ್ಚೆ ಆಗಿದೆ. ಉಳಿದ ಕ್ಷೇತ್ರಗಳ ಬಗ್ಗೆಯೂ ಚರ್ಚೆ ನಡೆದಿದೆ. ಆದರೆ, ಅಂತಿಮ ರೂಪ ಕೊಟ್ಟಿಲ್ಲ' ಎಂದು ಹೇಳಿದ್ದಾರೆ.
Be the first to comment