ಇತ್ತೀಚಿನ ದಿನಗಳಲ್ಲಿ ಹುಡುಗಿಯರು ಮುಖಕ್ಕೆ ಸ್ಕಾರ್ಫ್ ಕಟ್ಟಿಕೊಳ್ಳುವುದು ಟ್ರೆಂಡ್ ಆಗಿಬಿಟ್ಟಿದೆ... ಕೆಲವರು ಫ್ಯಾಷನ್ ಗಾಗಿ ಮುಖಕ್ಕೆ ಸ್ಕಾರ್ಫ್ ಕಟ್ಟಿಕೊಳ್ಳುತ್ತಿದ್ದರೆ, ಇನ್ನೂ ಕೆಲವರು ಮುಖದ ಸೌಂದರ್ಯ ಹಾಗೂ ಕೂದಲುಗಳು ಹಾಳಾಗುವುದನ್ನೂ ತಡೆಯಲು ಇದನ್ನು ಕಟ್ಟಿಕೊಳ್ಳುತ್ತಾರೆ. ಅದರಲ್ಲೂ ಸಾಮಾನ್ಯವಾಗಿ ಮಹಿಳೆಯರು ದ್ವಿಚಕ್ರ ವಾಹನದಲ್ಲಿ ಹೋಗುವಾಗ ರಸ್ತೆಯಲ್ಲಿನ ಧೂಳು ಮತ್ತು ಬಿಸಿಲನ್ನು ದೂರವಿಡಲು ಸ್ಕಾರ್ಫ್ ಅನ್ನು ಬಳಸುತ್ತಾರೆ. ಇನ್ನು ಕೆಲವರು ಸ್ಕಾರ್ಪ್ನ್ನು ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಉಪಯೋಗಿಸಿದರೆ, ಇನ್ನು ಕೆಲವರು ತಮ್ಮ ಡ್ರೆಸ್ ಗೆ ಮ್ಯಾಚ್ ಆಗುವ ಕಲರ್ ನ ಸ್ಕಾರ್ಪ್ ನ್ನು ಬಳಸುತ್ತಾರೆ.. ಇತ್ತೀಚೆಗಂತೂ ವಿಭಿನ್ನ ಡಿಸೈನ್, ಹಾಗೂ ಕಲರ್- ಕಲರ್ ಸ್ಕಾರ್ಫ್ ಮಾರುಕಟ್ಟೆಯಲ್ಲಿ ದೊರೆಯುತ್ತಿದೆ... ಅಲ್ಲದೆ ಬಣ್ಣ-ಬಣ್ಣದ ಕಾಟನ್ ಹಾಗೂ ನೈಲನ್ ಸ್ಕಾರ್ಫ್ ಗಂತೂ ಎಲ್ಲಿಲ್ಲ ಬೇಡಿಕೆ!... ಜೀನ್ಸ್ ಟಾಪ್, ಕುರ್ತಾ, ಹೀಗೆ ಸಾಮಾನ್ಯವಾಗಿ ಎಲ್ಲಾ ಡ್ರೆಸ್ ಗೆ ಸೂಟ್ ಆಗುವ ಸ್ಕಾರ್ಫ್ ಈಗ ಎಲ್ಲಿಲ್ಲದ ಬೇಡಿಕೆ. ಹುಡುಗಿಯರ ಸೌಂದರ್ಯ ವಿಷಯಕ್ಕೆ ಬಂದರೆ ಸ್ಕಾರ್ಫ್ ಧೂಳಿನಿಂದಾಗಿ ಮುಖದ ಸೌಂದರ್ಯ ಹಾಳಾಗುವುದನ್ನು ತಡೆಯುತ್ತದೆ ಹಾಗೂ ಕೂದಲಿಗೂ ಹಾನಿಯಾಗದಂತೆ ತಡೆಯುತ್ತದೆ. ಬನ್ನಿ ಇಂದಿನ ವಿಡಿಯೋದಲ್ಲಿ ಮುಖಕ್ಕೆ ಸ್ಕಾರ್ಫ್ ಹಾಕಿಕೊಳ್ಳುವ ಐದು ಸರಳ ಸಲಹೆಗಳನ್ನು ನೀಡಿದ್ದೇವೆ ಮುಂದೆ ಓದಿ...