ಮೈಸೂರು, ಮಾರ್ಚ್ 31: ವಿಧಾನಸಭೆ ಚುನಾವಣೆ ಪ್ರಚಾರದ ತರಾತುರಿಯಲ್ಲಿದ್ದರೂ ಸಿಎಂ ಸಿದ್ದರಾಮಯ್ಯ ಅವರು ಬಿಡುವು ಮಾಡಿಕೊಂಡು ಇಂದು ಬೆಳಗ್ಗೆ ತಮ್ಮ ಮೆಚ್ಚಿನ ಹೊಟೆಲ್‌ನಲ್ಲಿ ಇಡ್ಲಿ-ಸಾಂಬಾರ್ ಸವಿದರು. ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು ಬಂಡೀಪುರದ ರೆಸಾರ್ಟ್ ನಲ್ಲಿ ವಾಸ್ತವ್ಯದ ಬಳಿಕ ಮೈಸೂರಿಗೆ ಬಂದ ಕೂಡಲೇ ಸಿದ್ದರಾಮಯ್ಯ ಅವರು ಮಸಾಲೆ ದೋಸೆಗೆ ಫೇಮಸ್ ಆದ ಲಕ್ಷ್ಮೀಪುರಂ 'ರಮ್ಯಾ ಮಹೇಂದ್ರ' ಹೋಟೆಲ್ ಗೆ ತೆರಳಿ ಉಪಾಹಾರ ಸೇವಿಸಿದರು. ಸಿಎಂ ಹನುಮ ಜಯಂತಿ ಶುಭಾಶಯ: ಲೇವಡಿ ಮಾಡಿದ ಟ್ವಿಟ್ಟಿಗರು ಚಾಮುಂಡೇಶ್ವರಿ ಕ್ಷೇತ್ರದ ಹಳೆಯ ಸ್ನೇಹಿತರೊಂದಿಗೆ ಹೊಟೆಲ್‌ಗೆ ತೆರಳಿದ ಸಿದ್ದರಾಮಯ್ಯ ಅವರು ಹೋಟೆಲ್‌ನಲ್ಲಿ ತಮಗೆ ಇಷ್ಟವಾದ ಇಡ್ಲಿ ಸಾಂಬಾರ್, ದೋಸೆಯನ್ನು ಗೆಳೆಯರ ಜೊತೆ ಹರಟೆ ಹೊಡೆಯುತ್ತಾ ಮೆಲ್ಲಿದರು.