Skip to playerSkip to main content
  • 8 years ago
Scion of the Mysuru royal family Yaduveer's wife Trishika Kumari blessed with baby boy in a private hospital in Bengaluru on December 6.

ಮೈಸೂರು ಯದುವಂಶಕ್ಕೆ ಹೊಸ ಅತಿಥಿಯ ಆಗಮನವಾಗಿದೆ. ಮೈಸೂರಿನ ಮಹಾರಾಣಿ ತ್ರಿಷಿಕಾ ಕುಮಾರಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಇಂದಿರಾ ನಗರದ ಖಾಸಗಿ ಆಸ್ಪತ್ರೆಯಲ್ಲಿ ತ್ರಿಷಿಕಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಆರೋಗ್ಯವಾಗಿದ್ದಾರೆ. ಮಗು ಹುಟ್ಟಿದ ಖುಷಿಯಲ್ಲಿ ಅಂಬಾವಿಲಾಸ ಅರಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಇನ್ನು ಯದುವೀರ್ ಕೃಷ್ಣದತ್ತ ಒಡೆಯರ್ ಅವರು ತಂದೆಯಾದ ಖುಷಿಯಲ್ಲಿದ್ದಾರೆ.ತ್ರಿಷಿಕಾ ಕುಮಾರಿ ಅವರಿಗೆ ಇಂದು ಹೆರಿಗೆ ನೋವು ಕಾಣಿಸಿಕೊಂಡಿದ್ದು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಗರ್ಭಿಣಿ ಆದಾಗಿನಿಂದಲೂ ಬೆಂಗಳೂರಿನ ಇಂದಿರಾನಗರದಲ್ಲಿರುವ ತಾಯಿ ಮನೆಯಲ್ಲಿ ಅವರು ತಾಯಿಯ ಆರೈಕೆಯಲ್ಲಿದ್ದರು.2013ರಲ್ಲಿ ಶ್ರೀಕಂಠದತ್ತ ಒಡೆಯರ ಮರಣದ ನಂತರ 2015 ರಲ್ಲಿ ಮಹಾರಾಣಿ ಪ್ರಮೋದಾ ದೇವಿ ಅವರು ತಮಗೆ ಮಕ್ಕಳಿಲ್ಲದ ಕಾರಣ ಯದುವೀರ್ ಅವರನ್ನು ಮೈಸೂರು ರಾಜ ವಂಶಕ್ಕೆ ದತ್ತು ತೆಗೆದುಕೊಂಡಿದ್ದರು. 2016ರಲ್ಲಿ ರಾಜಸ್ಥಾನದ ದುರ್ಗಪುರದ ರಾಜವಂಶಸ್ಥರ ಕುಟುಂಬಕ್ಕೆ ಸೇರಿದ ತ್ರಿಷಿಕಾ ಕುಮಾರಿ ಅವರನ್ನು ವರಿಸಿದ್ದರು.

Category

🗞
News
Be the first to comment
Add your comment

Recommended