ಪ್ರೆಸ್ ಮೀಟ್ ನಲ್ಲಿ ಉಪ್ಪಿ ಹೇಗ್ ಮಾತಾಡ್ತಾರೆ ನೋಡಿ | Oneindia Kannada

  • 6 years ago
We need laborers and not leaders, commoners with a service oriented mindset people can join Karnataka Pragnavatha Janata Party (KPJP), said by Kannada Actor Upendra in Mysuru on Friday.


ಕೆಪಿಜೆಪಿ ಕ್ಯಾಶ್ ಲೆಸ್ ಪಕ್ಷ, ಮೈಸೂರಿನಲ್ಲಿ ದೂಳೆಬ್ಬಿಸಿದ ಉಪ್ಪಿ. ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಹೊರಟಿರುವ ಪಕ್ಷ ಕೆಪಿಜೆಪಿ (ಕರ್ನಾಟಕ ಪ್ರಜ್ಞಾವಂತರ ಜನತಾ ಪಕ್ಷ). ಪ್ರಜಾಕೀಯ ಪಕ್ಷ ಸ್ಥಾಪಿಸಿದ್ದೇನೆ. ಇಚ್ಛೆಯುಳ್ಳವರು ನಮ್ಮೊಂದಿಗೆ ಕೈಜೋಡಿಸಲು ಮುಕ್ತವಾಗಿ ಆಹ್ವಾನಿಸುತ್ತಿದ್ದೇನೆ ಎಂದು ನಟ- ನಿರ್ದೇಶಕ ಉಪೇಂದ್ರ ಕರೆ ನೀಡಿದರು.ಪಕ್ಷ ಸ್ಥಾಪನೆಯಾದ ಬಳಿಕ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಉಪೇಂದ್ರ, ದೇಶದ ದುರ್ವ್ಯವಸ್ಥೆ ನೋಡಿಕೊಂಡು ಸುಮ್ಮನಿರಲಾರದೆ ರಾಜಕೀಯವನ್ನು ತಳಹದಿಯಿಂದಲೇ ಸಂಪೂರ್ಣ ಬದಲಾವಣೆ ತರುವ ನಿಟ್ಟಿನಲ್ಲಿ ಕೆಪಿಜೆಪಿ ಸ್ಥಾಪಿಸಿದ್ದೇನೆ. ಇದಕ್ಕೆ ಜನ ಸೇವೆ ಮಾಡೋ ಇಚ್ಛೆಯುಳ್ಳವರು ಕೈ ಜೋಡಿಸಬಹುದು ಎಂದು ಆಹ್ವಾನ ನೀಡಿದರು.ದೇಶದ ಪ್ರಜೆಯಾಗಿ ನನ್ನ ಅಭಿಮತ, ವ್ಯವಸ್ಥೆಯೇ ಸರಿಯಿಲ್ಲ ಎಂದು ಭರವಸೆ ಕಳೆದುಕೊಂಡಿದ್ದೇ ನನ್ನಲ್ಲಿಯೂ ನಿರಾಶೆ ಮೂಡಿತ್ತು. ಆದರೆ ಭರವಸೆ ಕಳೆದುಕೊಳ್ಳಬಾರದೆಂದು ಈ ಪಕ್ಷ ಸ್ಥಾಪಿಸಿದ್ದೇನೆ. ಹಳ್ಳಿ ಹಳ್ಳಿಗಳ್ಳಿಯೂ ಅಭ್ಯರ್ಥಿಗಳು ಅತಿ ಉತ್ಸಾಹ ತೋರುತ್ತಿದ್ದಾರೆ. ಸಂಬಳಕ್ಕೆ ದುಡಿಯುವರು ಬನ್ನಿ, ಕೆಲಸ ಮಾಡುವರು ಬನ್ನಿ, ನಾಯಕರಾಗುವವರು ಬರುವುದು ಬೇಡ ಎಂದರು.

Recommended