ಪಿಎಫ್ ಚಂದಾದಾರರು ತಮ್ಮ ಭವಿಷ್ಯನಿಧಿ ಹಣವನ್ನು ಒಂದು ಅಕೌಂಟಿನಿಂದ ಇನ್ನೊಂದು ಅಕೌಂಟಿಗೆ ವರ್ಗಾವಣೆ ಮಾಡುವ ಪ್ರಕ್ರಿಯೆಯನ್ನು ಸರಳೀಕರಿಸಿ ಭವಿಷ್ಯನಿಧಿ ಕಚೇರಿ ಸುತ್ತೋಲೆ ಹೊರಡಿಸಿದೆ. ಇತ್ತೀಚಿನ ದಿನಗಳಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಜಾರಿಗೆ ತರುತ್ತಿರುವ ಪಿಎಫ್ ಕಚೇರಿ, ವಿದ್ ಡ್ರಾವಲ್ ಸೇರಿ ಹಲವು ವ್ಯವಸ್ಥೆಗಳನ್ನು ಆನ್ಲೈನ್ ಪದ್ದತಿಯಡಿ ತಂದಿತ್ತು. ಈ ಹಿಂದೆ, ಅರ್ಜಿ ತುಂಬಿ, ಅದಕ್ಕೆ ತಾನು ಕೆಲಸ ಮಾಡುತ್ತಿದ್ದ ಹಳೆಯ ಸಂಸ್ಥೆಯ ಮಾನವ ಸಂಪನ್ಮೂಲ ಖಾತೆಯ ಅಧಿಕಾರಿಗಳಿಂದ ಸಹಿತೆಗೆದುಕೊಂಡು ಪಿಎಫ್ ಕಚೇರಿಗೆ ಸಲ್ಲಿಸಬೇಕಾಗಿತ್ತು. ಹಳೆ ಕಂಪನಿಯಲ್ಲಿನ EPF ಖಾತೆ ವರ್ಗಾವಣೆ ಇನ್ನು ಸರಳ ಈ ತಕ್ಷಣದಿಂದಲೇ ಜಾರಿಗೆ ಬರುವಂತೆ, ಒಂದು ಸಂಸ್ಥೆಯಿಂದ ಇನ್ನೊಂದು ಸಂಸ್ಥೆಗೆ ನೌಕರ ಸೇರಿಕೊಂಡಾಗ ಮತ್ತು ಆತ ಅದನ್ನು ವಿದ್ ಡ್ರಾವಲ್ ಮಾಡದೇ, ಹೊಸ ಕಂಪೆನಿಯ ಅಕೌಂಟಿಗೆ ವರ್ಗಾವಣೆ ಮಾಡಲು ಬಯಸಿದರೆ, ಯುಎಎನ್ (Universal Account Number) ಮೂಲಕ ಹೊಸ ಅಕೌಂಟಿಗೆ ಹಿಂದಿನ ಪಿಎಫ್ ಹಣ ಜಮೆಯಾಗುತ್ತದೆ.ಮಿಸ್ ಕಾಲ್ ಕೊಟ್ಟು ತಮ್ಮ ಅಕೌಂಟಿನಲ್ಲಿ ಪಿಎಫ್ ಹಣ ಎಷ್ಟಿದೆ ಎಂದು ತಿಳಿದುಕೊಳ್ಳುವ ಪದ್ದತಿಯನ್ನು ಕಳೆದ ಸೆಪ್ಟಂಬರ್ ತಿಂಗಳಾಂತ್ಯದಲ್ಲಿ ಭವಿಷ್ಯನಿಧಿ ಕಚೇರಿ ಜಾರಿಗೆ ತಂದಿತ್ತು. ಜೊತೆಗೆ, ಗ್ರಾಹಕರ ಅನುಕೂಲಕ್ಕಾಗಿ ಭವಿಷ್ಯ ನಿಧಿ ಮಂಡಳಿ ಹೊಸ ವೆಬ್‌ಸೈಟ್ ಆರಂಭಿಸಿತ್ತು.
RPFO (Regional Provident Fund Office) has introduced automated PF transfer system from old account to new account. If employee resigned and joined new company, through UAN (Universal Account Number), his/her old PF amount will transfer to his/her's new companies PF account.
Comments