ಬಿಗ್ ಬಾಸ್ ಕನ್ನಡ ಸೀಸನ್ 5 : ಈ ವಾರ ಮನೆಯಿಂದ ಹೊರಗೆ ಹೋಗೋರು ಯಾರು?

  • 7 years ago
Bigg Boss Kannada 5: Week 3: Diwakar, Niveditha Gowda, Jaya Srinivasan, Riyaz, Anupama Gowda, Dayal Padmanabhan and Shruthi Prakash are nominated for this week's elimination. So will be going out from Big House this week.

ಬಿಗ್ ಬಾಸ್ ಕನ್ನಡ-5': ಮೂರನೇ ವಾರ ಗೇಟ್ ಪಾಸ್ ಯಾರಿಗೆ? ಜನಸಾಮಾನ್ಯ ಸ್ಪರ್ಧಿಗಳ ಪರ ದನಿ ಎತ್ತಿ, ಸೆಲೆಬ್ರಿಟಿ ಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದ ರಿಯಾಝ್ ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಾಮಿನೇಟ್ ಆಗಿದ್ದಾರೆ. ಇತ್ತ 'ಮೊಟ್ಟೆ' ಆಟದಲ್ಲಿ ಸಿಕ್ಕಾಪಟ್ಟೆ ಗರಂ ಆಗಿದ್ದ ದಯಾಳ್ ಪದ್ಮನಾಭನ್ ರನ್ನೂ ಸ್ಪರ್ಧಿಗಳು ನಾಮಿನೇಟ್ ಮಾಡಿದ್ದಾರೆ. ಇತ್ತ ಎಲ್ಲರೊಂದಿಗೆ ಚೆನ್ನಾಗಿ ಮಾತನಾಡಿಕೊಂಡಿದ್ದರೂ, ಸಂಖ್ಯಾಶಾಸ್ತ್ರಜ್ಞ ಜಯಶ್ರೀನಿವಾಸನ್ ಟಾರ್ಗೆಟ್ ಆಗಿದ್ದಾರೆ.ಹಾಗಾದ್ರೆ, 'ಬಿಗ್ ಬಾಸ್' ಮನೆಯಿಂದ ಮೂರನೇ ವಾರ ಹೊರ ಹೋಗಲು ನಾಮಿನೇಟ್ ಆಗಿರುವ ಸದಸ್ಯರು ಯಾರು.? ಸಂಪೂರ್ಣ ವಿವರ ಇಲ್ಲಿದೆ. ಕ್ಯಾಪ್ಟನ್ ಆಯ್ಕೆಗಾಗಿ 'ಬಿಗ್ ಬಾಸ್' ನೀಡಿದ ಟಾಸ್ಕ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಸಮೀರಾಚಾರ್ಯ ಕ್ಯಾಪ್ಟನ್ ಆದರು. ಹೀಗಾಗಿ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸಮೀರಾಚಾರ್ಯ ಸೇಫ್ ಆದರು. ರಿಯಾಝ್, ದಯಾಳ್, ಜಯಶ್ರೀನಿವಾಸನ್, ನಿವೇದಿತಾ ಗೌಡ, ದಿವಾಕರ್, ಶ್ರುತಿ ಪ್ರಕಾಶ್, ಅನುಪಮಾ ಗೌಡ ಪೈಕಿ ಈ ವಾರ ಯಾರು ಔಟ್ ಆಗಬೇಕು.? ನಿಮ್ಮ ಮತ ಯಾರಿಗೆ.? ನಿಮ್ಮ ಆಯ್ಕೆಯನ್ನ ನಮಗೆ ತಿಳಿಸಿ.

Recommended